Advertisement

ಕೋಟೆ ಪುರಸಭೆ ಬಜೆಟ್‌: ಮೂಲ ಸೌಕರ್ಯಕ್ಕೆ  ಹೆಚ್ಚಿನ ಆದ್ಯತೆ

12:56 PM Mar 28, 2023 | Team Udayavani |

ಎಚ್‌.ಡಿ.ಕೋಟೆ : ಪುರಸಭೆಯ 2023-2024ನೇ ಸಾಲಿನ 62.29 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದ ಪುರಸಭೆಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್‌ ಅವರಿಗೆ ಪುರಸಭೆಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪುರಸಭೆ ಅಧ್ಯಕ್ಷೆ ಅನಿತ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ದಿ.ಚಿಕ್ಕಮಾದು ಸಭಾಂಗಣದಲ್ಲಿ ನಡೆದ ಬಜೆಟ್‌ ಮಂಡನೆ ಸಭೆಯಲ್ಲಿ ಮುಖ್ಯಾಧಿಕಾರಿ ಪಿ.ಸುರೇಶ್‌ ಆರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್‌ ವೇದಿಕೆಯನ್ನೇರದೆ ಸದಸ್ಯರು ಆಸೀನರಾಗುವ ಅಸನಗಳಲ್ಲಿ ಆಸೀನರಾಗಿದ್ದಕ್ಕೆ ಸದಸ್ಯ ಮಿಲ್‌ ನಾಗರಾಜು ಆಕ್ಷೇಪ ವ್ಯಕ್ತಪಡಿಸಿ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌ ವೇದಿಕೆಯಲ್ಲಿ ಆಸೀನರಾಗಿ ಬಜೆಟ್‌ ಮಂಡಿಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಸಭೆಯಲ್ಲಿದ್ದ ಬಹುಸಂಖ್ಯೆ ಸದಸ್ಯರು ಸಹಮತ ನೀಡಿ ವೇದಿಕೆ ಅಲಂಕರಿಸುವಂತೆ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಐಡಿಯಾ ವೆಂಕಟೇಶ್‌ ಹಿಂದಿನ ಸಭೆಯೊಂದರಲ್ಲಿ ವೇದಿಕೆ ಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಸದಸ್ಯರೊಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಕುಳಿತು ಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದಿದ್ದೇನೆ. ಸದಸ್ಯರಿಗೆ ನನ್ನ ಮೇಲಿರುವ ಗೌರವಕ್ಕೆ ನಾನು ಚಿರಋಣಿಯಾಗಿದ್ದು, ಪುರಸಭೆ ಮುಖ್ಯಾಧಿಕಾರಿಗಳು ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಕುಳಿತುಕೊಳ್ಳಬಹುದೇ? ಇಲ್ಲವೆ ಅನ್ನುವುದನ್ನು ಸರ್ಕಾರಿಂದ ನಿಯಮಾನು ಸಾರ ಖಾತರಿ ಪಡಿಸಿಕೊಂಡು ತಿಳಿಸುವ ತನಕ ನಾನು ವೇದಿಕೆ ಅಲಂಕರಿಸುವುದಿಲ್ಲ ಸರ್ವಸದಸ್ಯರೂ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡು. ಬಳಿಕ ವೇದಿಕೆಯಿಂದ ಎದುರಿನಲ್ಲೇ ಬಜೆಟ್‌ ಮಂಡಿಸಿದ ವೆಂಕಟೇಶ್‌ ಪುರಸಭೆ ಆದಾಯದ ಮೂಲಗಳ ಅಂಕಿ ಅಂಶದ ಮಾಹಿತಿ ನೀರಿ 2022-23ನೇ ಸಾಲಿನ ಒಟ್ಟು ಆದಾಯ 15.01 ಕೋಟಿ ಅದರಂತೆಯೇ ಪಟ್ಟಣದ ಮೂಲಭೂತ ಸೌಲಭ್ಯಗಳ ಮತ್ತು ಅಭಿವೃದ್ಧಿ ಖರ್ಚು 15.38 ಕೋಟಿ, ಉಳಿಕೆ 62.29 ಲಕ್ಷದ ಬಜೆಟ್‌ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನೊಬ್ಬ ಪ್ರಥಮ ದರ್ಜೆ ಗುತ್ತಿಗೆದಾರ ನಾಗಿದ್ದು, ನನ್ನ ಸ್ವಂತ ಕೆಲಸಗಳನ್ನು ಬದಿಗೊತ್ತಿ ಪ್ರತಿದಿನ ಪುರಸಭೆಯ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೆಕೊಂಡು ಸರ್ಕಾರಿ ನೌಕರರಂತೆ ಬೆಳಗಿನಿಂದ ಸಂಜೆ ತನಕ ಪುರಸಭೆಯಲ್ಲಿ ದಿನ ಕಳೆಯುತ್ತಿದ್ದೇನೆ. ಪುರಸಭೆ 4 ಲಕ್ಷ ಆದಾಯ ಗಳಿಕೆ: ಪುರಸಭೆ ಆದಾಯ ಹೆಚ್ಚು ಮಾಡಲು ವಿವಿಧ ಮೂಲಗಳಿಗೆ ಇದಕ್ಕೆ ಉತ್ತಮ ಉದಾರಣೆ ಯಾಗಿ ವರ್ತಕರಿಂದ ಪ್ರತಿವರ್ಷಕ್ಕೆ 1 ಲಕ್ಷ ಆದಾಯ ಪುರಸಭೆಗಿತ್ತು. ಕಳೆದ 15 ದಿನಗಳ ಹಿಂದೆ ಅದಾಲತ್‌ ಮೂಲಕ ವರ್ತಕರಿಗೆ ಸ್ಥಳದಲ್ಲಿಯೇ ಪರವಾನಗಿ ನೀಡುವ ಕೆಲಸ ಕೈಗೆತ್ತಿಕೊಂಡಾಗ 2 ದಿನದಲ್ಲಿ ಪುರಸಭೆ 4 ಲಕ್ಷ ಆದಾಯಗಳಿಕೆಯಾಗಿದೆ. ಈ ವರ್ಷದ ಕೊನೆಯ ತನಕ ವರ್ತಕರಿಂದ ಪುರಸಭೆಗೆ 8 ಲಕ್ಷ ಪರವಾನಗಿ ಶುಲ್ಕ ಪಾವತಿಯಾಗುವ ನಿರೀಕ್ಷೆ ಇದೆ. ಕಟ್ಟಡಗಳ ಶುಲ್ಕ, ನೀರಿನ ತೆರಿಗೆ ವಸೂಲಿ, ರಸ್ತೆ ಬದಿ ವ್ಯಾಪಾರಸ್ಥರ ಶುಲ್ಕ, ಆಸ್ತಿ ತೆರಿಗೆ ಹೀಗೆ ಎಲ್ಲಾ ಮೂಲಗಳ ವಸೂಲಾತಿಗೆ ಪುರಸಭೆ ಅಧಿಕಾರಿಗಳು ಸಹಕಾರ ನೀಡಿ ಕೆಲಸ ಮಾಡಿದರೆ ಪುರಸಭೆಗೆ ಸಾಕಷ್ಟು ಆದಾಯ ಏರಿಕೆ ಮಾಡುವುದರಲ್ಲಿ ಸಂಶಯ ಇಲ್ಲ ಇದಕ್ಕೆ ಸಾರ್ವಜನಿಕರಷ್ಟೇ ಅಲ್ಲದೆ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

9 ಸದಸ್ಯರು ಗೈರು: ಬಜೆಟ್‌ ಮಂಡನೆ ವೇಳೆ ಕಾಂಗ್ರೆಸ್‌ ಪಕ್ಷದ 11 ಸದಸ್ಯರ ಪೈಕಿ ಇಬ್ಬರನ್ನು ಹೊರತುಪಡಿಸಿ ಉಪಾಧ್ಯಕ್ಷೆ ಗೀತಾ ಗಿರಿಗೌಡ ಸೇರಿ 9 ಸದಸ್ಯರು ಗೈರು ಹಾಜರಿದ್ದರು. ಐಡಿಯಾ ವೆಂಕಟೇಶ್‌ ಅವರ ಮುಂದಾ ಲೋಚನೆಯ ಐಡಿಯಾಗಳಿಗೆ ಮನಸೋತ ಬಹುಸಂಖ್ಯೆ ಪುರಸಭೆ ಸದಸ್ಯರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸದಸ್ಯರಾದ ಸರೋಜಮ್ಮ, ಲೋಕೇಶ್‌, ಶಿವಮ್ಮ, ಕವಿತ, ಶಾಂತಮ್ಮ, ಹರೀಶ್‌ಗೌಡ, ನಂಜಪ್ಪ, ನಂದಿನಿ, ಲೋಕೇಶ್‌, ನಾಮನಿದೇಶನ ಸದಸ್ಯರಾದ ಸಿದ್ದರಾಜು, ಚಂದ್ರಮೌಳಿ, ಮಹೇಶ, ಲೋಕೇಶ ಸೇರಿದಂತೆ ಪುರಸಭೆ ಸಿಬ್ಬಂದಿ ಉಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next