Advertisement

ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ಮಾಜಿ ಪ್ರಧಾನಿ ದೇವೇಗೌಡ ಕಳವಳ

06:02 PM May 11, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಎದುರಿಸಬೇಕಾಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಜಲಧಾರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ನೀರಿಗಾಗಿ ಸಾಕಷ್ಟು ಕಷ್ಟ ಇದೆ ಟ್ಯಾಂಕರ್ ನೀರನ್ನು ತರಿಸಲಾಗುತ್ತಿದೆ. ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿರಲಿದೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರು.

ಜನತಾ ಜಲಧಾರೆ‌ ಕಾರ್ಯಕ್ರಮದ ಉದ್ದೇಶ ನಮ್ಮ ನದಿಗಳ ನೀರನ್ನ ನಾವು ಬಳಸಿಕೊಳ್ಳಬೇಕು ಎನ್ನುವುದಾಗಿದೆ. ಸದ್ಯ ನಮ್ಮ ನದಿ ನೀರನ್ನು ನಾವು ಬಳಸಿಕೊಳ್ಳಲು ಅನೇಕ ಸಮಸ್ಯೆಗಳಿವೆ. ಕೇಂದ್ರದ ನಿರ್ಲಕ್ಷ್ಯ ಮನೋಭಾವದಿಂದ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ, ಎಲ್ಲಾ ಕಡೆ ಕಾವೇರಿ ನೀರನ್ನು ಕೊಡಲು ಆಗಿಲ್ಲ ಈಗಲೂ ಕುಡಿಯುವ ನೀರಿನ ಕೊರತೆ ಇದೆ ಎಂದು ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಬೆಂಗಳೂರು ಅಭಿವೃದ್ಧಿ ಹೊಂದಿದೆ ಅಂದರೆ ಅದು ಜೆಡಿಎಸ್ ಸರ್ಕಾರ ಇದ್ದಾಗ ಕೊಟ್ಟ ಕಾರ್ಯಕ್ರಮಗಳಿಂದ. ಈಗಿನ ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ, ಮೊನ್ನೆ ಬಿದ್ದ ಮಳೆಯಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕ್ರೀಡಾಂಗಣದ ಛಾವಣಿ ಬಿದ್ದು ಹೋಗಿದೆ, ಇದು ಇವರ ಅಭಿವೃದ್ಧಿ ಶೈಲಿ.ಮನೆಗಳೇ ಇಲ್ಲದೇ ಗುಡಿಸಿಲಿನಲ್ಲಿ ಅನೇಕ ಜನ ವಾಸ ಮಾಡುತ್ತಾ ಇದ್ದಾರೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ : ಕೆಜಿಎಫ್ -2 “ಬಾಕ್ಸಾಫೀಸ್ ಸುಲ್ತಾನ್‌” ಟ್ವೀಟ್ ಗೆ ದಚ್ಚು ಫ್ಯಾನ್ಸ್ ಗರಂ: ಆದದ್ದೇನು?

Advertisement

ಧರ್ಮ ಬೇಕಾ? ಜೀವನಾ ಬೇಕಾ? ಜನರನ್ನು ಪ್ರಶ್ನಿಸಿದ ಹೆಚ್.ಡಿ.ಕೆ :

ಬೆಂಗಳೂರು: ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ. ನಿಮಗೆ ಧರ್ಮ ಬೇಕಾ? ಜೀವನ ಬೇಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನರನ್ನು ಪ್ರಶ್ನೆ ಮಾಡಿದ್ದಾರೆ.

ಧರ್ಮವನ್ನು ಮನೆಯಲ್ಲಿ ಇಟ್ಟುಕೊಳ್ಳೋಣ. ಬೀದಿಯಲ್ಲಿ ರಕ್ತದ ಓಕುಳಿ ಹರಿಸುವುದು ಬೇಡ ಎಂದು ಯುವಕರಿಗೆ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಈಗಾಗಲೇ ಎರಡು ಬಾರಿ ನಾನು ನಮ್ಮ ತಂದೆ-ತಾಯಿಗಳ ಪುಣ್ಯದಿಂದ ಮುಖ್ಯಮಂತ್ರಿ ಆಗಿದ್ದೇನೆ. ಮತ್ತೆ ಸಿಎಂ ಆಗಬೇಕು ಅನ್ನೋದು ಮುಖ್ಯ ಅಲ್ಲ. ಇಂದು ಬೆಳಗ್ಗೆ ಒಂದು ಚಾನಲ್ʼನಲ್ಲಿ ಶಾಲಾ ಮಕ್ಕಳು ಅನುಭವಿಸುತ್ತಿರುವ ಹಿಂಸೆಯನ್ನು ನೋಡಿದ್ದೇನೆ. ಮಹಾಲಕ್ಷ್ಮಿ ಲೇಔಟ್ʼನಲ್ಲಿ ಖಾಸಗಿ ಶಾಲೆಯ ಅವ್ಯವಸ್ಥೆಯನ್ನು ಆ ವಾಹಿನಿ ಹೊರಗಿಟ್ಟಿದೆ. ಹಲವಾರು ಶಾಲೆಗಳಲ್ಲಿ ಇಂತಾ ವ್ಯವಸ್ಥೆ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣಗೆ ಸವಾಲು :

ತಾಕತ್ತು ಇದ್ದರೆ ಸಚಿವ ಡಾ.ಅಶ್ವತ್ಥನಾರಾಯಣ ಅವರು ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ ಎಂದು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದರು.

ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಅವರ ರೀತಿ ಲೂಟಿ ಹೊಡೆದಿಲ್ಲ. ಲೂಟಿ ಮಾಡ್ತಿರುವವರು ಅವರು. ಅವರಿಗೆ ತಾಕತ್ತು ಇದ್ದರೆ ನಾಳೆ ಬೆಳಗ್ಗೆಯೇ ನನ್ನ ವಿರುದ್ಧದ ದಾಖಲೆ ಬಿಡುಗಡೆ ‌ಮಾಡಲಿ ಎಂದು ಮಾಜಿ ಮುಖ್ಯಮಂತ್ರಿಗಳು ಸವಾಲು ಹಾಕಿದರು.

ಇದನ್ನೂ ಓದಿ :ನ್ಯಾಯಾಂಗದ ಬಗ್ಗೆ ಗೌರವವಿದೆ, ಆದರೆ ಲಕ್ಷ್ಮಣ ರೇಖೆ ದಾಟುವಂತಿಲ್ಲ: ಸುಪ್ರೀಂಗೆ ಸಚಿವ ರಿಜಿಜು 

ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ :

ಐಪಿಎಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆಯನ್ನು ಸರ್ಕಾರ ಅಂಗೀಕಾರ ಮಾಡಬಾರದು. ಸರ್ಕಾರದ ನಡವಳಿಕೆ ಖಂಡಿಸಿ ಅವರು ರಾಜೀನಾಮೆ ನೀಡಿದ್ದಾರೆ. ಅನೇಕ ಜನ ನಕಲಿ ಮೀಸಲಾತಿ ಸರ್ಟಿಫಿಕೇಟ್ ಪಡೆದಿದ್ದರು. ಇದನ್ನು ತನಿಖೆ ಮಾಡಲು ಹೋದರೆ ವರ್ಗಾವಣೆ ಮಾಡಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಬಗ್ಗೆ ಸಿದ್ದರಾಮಯ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಕಲಿ ದಾಖಲಾತಿ ಕೊಟ್ಟು ಪೊಲೀಸ್ ಅಧಿಕಾರಿಯಾಗಿದ್ದ ಕೆಂಪಯ್ಯ ಆಯಕಟ್ಟಿನ ಅಧಿಕಾರ ಪಡೆದಿದ್ದರು. ಅಂತಹವರಿಗೆ ಪೊಲೀಸ್ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದರು. ಸಿದ್ದರಾಮಯ್ಯಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ರಾಜ್ಯದಿಂದ 25 ನಪುಂಸಕರ ಆಯ್ಕೆ:

ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, “ರಾಜ್ಯದಿಂದ ಲೋಕಸಭೆಗೆ ಇಪ್ಪತ್ತೈದು ಜನ ನಪುಂಸಕರನ್ನು ಆರಿಸಿ ಕಳಿಸಿದ್ದೀರಾ? ಅವರೆಲ್ಲಾ ಏನು ಮಾಡುತ್ತಿದಾರೆ, ಮೋದಿ ಮೋದಿ ಅಂತಾ ದಿನವಿಡೀ ಜಪ ಮಾಡುತ್ತಾ ಇದ್ದಾರೆ” ಎಂದು ವ್ಯಂಗ್ಯವಾಡಿದರು.

ರಾಜ್ಯಾದ್ಯಂತ ನಾನು ಸುತ್ತಾಡಿ ಕೆಲಸ ಮಾಡುತ್ತಿದ್ದೇನೆ. ನೂರಕ್ಕೆ ನೂರರಷ್ಟು ಈ ಪಕ್ಷ ಅಧಿಕಾರಕ್ಕೆ ಬರುತ್ತದೆ ಕರ್ನಾಟಕದ ಜನ ಎರಡೂ ಸಿನಿಮಾ ನೋಡಿ ಆಗಿದೆ ಒಂದು ಮೋದಿ ಸಿನಿಮಾ,ಮತ್ತೊಂದು ಸೋನಿಯಾ ಸಿನಿಮಾ. ಮುಂದೆ ಜೆಡಿಎಸ್ ಅನ್ನು ಜನ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ʼಡಿಕೆ ಸಿಎಂ ಆಗುವುದು ನಿಶ್ಚಿತ:

ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಮಾತನಾಡಿ, ಜನತಾ ಜಲಧಾರೆ ಕಾರ್ಯಕ್ರಮ ಮೇ 13 ರಂದು ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಅದಕ್ಕೆ ಐದರಿಂದ ಆರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಜನ ಬೆಂಬಲ ಅಭೂತಪೂರ್ವ ವಾಗಿ ಸಿಗುತ್ತಾ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next