Advertisement

ತಮಿಳುನಾಡಿನಾದ್ಯಂತ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್ ಗೆ ಅನುಮತಿ ನೀಡಿದ ಕೋರ್ಟ್

07:03 PM Nov 04, 2022 | Team Udayavani |

ಚೆನ್ನೈ: ನವೆಂಬರ್ 6 ರಂದು ತಮಿಳುನಾಡಿನಾದ್ಯಂತ 44 ಸ್ಥಳಗಳಲ್ಲಿ ಪಥ ಸಂಚಲನ ನಡೆಸಲು ಆರ್‌ಎಸ್‌ಎಸ್‌ಗೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

Advertisement

50 ರಲ್ಲಿ 44 ಸ್ಥಳಗಳಲ್ಲಿಮೆರವಣಿಗೆಗೆ ಅನುಮತಿ ನೀಡಬಹುದು ಎಂದು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಿಕೆ ಇಳಂತಿರಾಯನ್ ಹೇಳಿದ್ದಾರೆ. ಎಲ್ಲಾ ಸ್ಥಳಗಳಿಗೆ ಸಂಬಂಧಿಸಿದಂತೆ ಗುಪ್ತಚರ ವರದಿಗಳಲ್ಲಿ ತನಗೆ ಪ್ರತಿಕೂಲವಾದ ಏನೂ ಕಂಡುಬಂದಿಲ್ಲ ಮತ್ತು 6 ಸ್ಥಳಗಳಲ್ಲಿ ಮಾತ್ರ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಬೇಕು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರ್‌ಕೋಯಿಲ್ ಸೇರಿದಂತೆ ಆರು ಕೋಮು ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ.

ಗುಪ್ತಚರ ಸಂಸ್ಥೆಗಳ ವರದಿಗಳಲ್ಲಿ ವ್ಯತಿರಿಕ್ತವಾಗಿ ಏನೂ ಕಂಡುಬಂದಿಲ್ಲ ಎಂದು ತೀರ್ಪು ನೀಡಿದ ನ್ಯಾಯಾಲಯ, ಎರಡು ತಿಂಗಳ ನಂತರ ಇತರ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಪಡೆಯಲು ಆರ್‌ಎಸ್‌ಎಸ್‌ಗೆ ಅನುಮತಿ ನೀಡಿದೆ.

ಕೊಯಮತ್ತೂರು ಇತ್ತೀಚೆಗೆ ದೀಪಾವಳಿಯ ಒಂದು ದಿನದ ಮೊದಲು ಕಾರ್ ಸ್ಫೋಟಕ್ಕೆ ಸಾಕ್ಷಿಯಾಗಿತ್ತು, ಇದರಲ್ಲಿ ಜಮೀಶಾ ಮುಬಿನ್ ಎಂಬ ಉಗ್ರ ನಂಟು ಹೊಂದಿದ್ದವ ಸಾವನ್ನಪ್ಪಿದ್ದ. ಷ್ಟ್ರೀಯ ತನಿಖಾ ಸಂಸ್ಥೆಯು ಈ ಪ್ರಕರಣದ ತನಿಖೆ ನಡೆಸುತ್ತಿದೆ.

Advertisement

ಈ ಹಿಂದೆ ಆರ್‌ಎಸ್‌ಎಸ್‌ ಸಂಘಟನೆಯು ಕೋರಿದ್ದ 50 ಸ್ಥಳಗಳ ಪೈಕಿ ಮೂರರಲ್ಲಿ ಮಾತ್ರ ಮೆರವಣಿಗೆಗೆ ರಾಜ್ಯ ಸರಕಾರ ಅನುಮತಿ ನೀಡಿತ್ತು. ನಂತರ ಆರ್‌ಎಸ್‌ಎಸ್‌ ಕೋರ್ಟ್ ಗೆ ನಿಂದನೆ ಅರ್ಜಿಯನ್ನು ಸಲ್ಲಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next