Advertisement

ತನ್ನ ಚೇಂಬರ್‌ಗೆ ಸಿಸಿಟಿವಿ : ಮದ್ರಾಸ್‌ ಹೈಕೋರ್ಟ್‌ ಜಸ್ಟಿಸ್‌ ಆದೇಶ

07:05 AM Feb 15, 2019 | udayavani editorial |

ಚೆನ್ನೈ : ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳ ವನ್ನು ತಡೆಯುವ ನಿಟ್ಟಿನಲ್ಲಿ ಮದ್ರಾಸ್‌ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್‌ ಎಸ್‌ ಎಂ ಸುಬ್ರಮಣಿಯಮ್‌ ಅವರು ತಾವೇ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ,  ತನ್ನ  ಕಾರ್ಯಾಲಯಕ್ಕೇ ಮೊದಲಾಗಿ, ಎರಡು ವಾರಗಳ ಒಳಗೆ, ಸಿಸಿಟಿವಿ ಅಳವಡಿಸುವಂತೆ ಕೋರ್ಟ್‌ ರಿಜಿಸ್ಟ್ರಿಗೆ ನಿರ್ದೇಶ ನೀಡಿದ್ದಾರೆ. 

Advertisement

ಟನ್‌ಗಟ್ಟಲೆ ಉಪದೇಶಕ್ಕಿಂತ ಒಂದು ಔನ್ಸಿನಷ್ಟು ಆಚರಣೆಯೇ ಮೇಲು ಎಂಬ ಮಹಾತ್ಮ ಗಾಂಧೀಜಿಯವರ ಉಕ್ತಿಯನ್ನು ಉಲ್ಲೇಖೀಸಿದ ಜಸ್ಟಿಸ್‌ ಸುಬ್ರಮಣಿಯಂ ಅವರು, ತಮಿಳು ನಾಡು ಸರಕಾರದ ಉನ್ನತಾಧಿಕಾರಿಗಳ ಕಾರ್ಯಾಲಯಕ್ಕೂ ಇದೇ ರೀತಿ ಸಿಸಿಟಿವಿ ಅಳವಡಿಸಬೇಕು ಎಂಬ ಸಲಹೆ ನೀಡಿದ್ದಾರೆ. 

ಐಪಿಎಸ್‌ ಅಧಿಕಾರಿ ಎಸ್‌ ಮುರುಗನ್‌ ಮತ್ತು ಓರ್ವ ಮಹಿಳಾ ಪೊಲೀಸ್‌ ಸುಪರಿಂಟೆಂಡೆಂಟ್‌, ಹಿರಿಯ ಪೊಲೀಸ್‌ ಅಧಿಕಾರಿಯ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪದ ಅರ್ಜಿಯನ್ನು ವಿಲೇವಾರಿ ಮಾಡಿದ ಸಂದರ್ಭದಲ್ಲಿ ಜಸ್ಟಿಸ್‌ ಸುಬ್ರಮಣಿಯಮ್‌ ಅವರು ಈ ನಿದೇಶ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next