Advertisement

ದಿನಕರನ್‌ ಬೆಂಬಲಿಗ ಶಾಸಕರಿಬ್ಬರಿಗೆ ಹೈಕೋರ್ಟ್‌ ಜಾಮೀನು

06:52 PM Mar 13, 2018 | Team Udayavani |

ಚೆನ್ನೈ : ತನ್ನ ವಿರುದ್ಧ ದಾಖಲಾಗಿರುವ ಕೇಸೊಂದರಲ್ಲಿ ತನ್ನ ಬಂಧನ ಆಗಬಹುದೆಂಬ ಭೀತಿ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಲೇರಿದ್ದ, ಬದಿಗೊತ್ತಲ್ಪಟ್ಟಿರುವ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್‌ ಅವರನ್ನು ಬೆಂಬಲಿಸಿದ  ಅನರ್ಹ ಶಾಸಕರಾದ ಪಿ ವೆಟ್ರೀವೇಲ್‌ ಮತ್ತು ತಂಗಸೆಲ್ವಂ ಅವರಿಗೆ ಮದ್ರಾಸ್‌ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ. 

Advertisement

ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಜಸ್ಟಿಸ್‌ ಎ ಡಿ ಜಗದೀಶ್‌ ಚಂದ್ರ ಅವರು, ಅರ್ಜಿದಾರರು ಮಧುರೆಯಲ್ಲೇ ಉಳಿದುಕೊಳ್ಳಬೇಕು ಮತ್ತು ತಳ್ಳಕುಳಂ ಪೊಲೀಸ್‌ ಠಾಣೆಗೆ ಎರಡು ವಾರಗಳ ಕಾಲ ಹಾಜರಾಗಬೇಕು ಎಂಬ ಶರತ್ತನ್ನು ವಿಧಿಸಿದರು. 

ಕಳೆದ ಮಾರ್ಚ್‌ 1ರಂದು ಇವರು ಸಚಿವಾಲಯದಲ್ಲಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸುವುದಕ್ಕೆ ತಡೆ ಒಡ್ಡಿದರೆಂಬ ಕೇಸನ್ನು ಇವರ ವಿರುದ್ಧ  ದಾಖಲಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next