Advertisement
ಒಂದೆಡೆ ಮುರಿದು ಬಿದ್ದ ಛಾವಣಿ, ಮತ್ತೂಂದೆಡೆ ಈಗಲೋ ಆಗಲೋ ಬೀಳುವಂತಿರುವ ಶಾಲಾ ಕಟ್ಟಡ ಇದು ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕನ್ನಸಂದ್ರ ಕಾಲೋನಿ ಸರ್ಕಾರಿ ಶಾಲೆಯ ದುಸ್ಥಿತಿ. ಸುಮಾರು ವರ್ಷಗಳಿಂದ ಈ ಶಾಲೆಯ ಕಟ್ಟಡದ ಮೇಲ್ಛಾವಣಿ ದುರಸ್ತಿಯಾಗದೇ ಕುಸಿಯುವ ಹಂತ ತಲುಪಿದೆ. ಹಾಗಾಗಿ ಪೋಷಕರು ಆತಂಕದಲ್ಲೇಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಎಲ್ಲಿ ಯಾವಾಗ ಅನಾಹುತ ಸಂಭವಿಸುವುದೋ ಎಂಬ ಆತಂಕ ಶಿಕ್ಷಕ ವರ್ಗಕ್ಕೂ ಇದೆ.
Related Articles
Advertisement
ದುರಸ್ತಿಗೆ ಅಗ್ರಹ: ವಿದ್ಯಾರ್ಥಿಗಳಿಗೆ ಬೇಕಾಗಿರು ವ ಮೂಲ ಸೌಲಭ್ಯ ಸರ್ಕಾರ ಒದಗಿಸಿ ಶಾಲಾ ಅಭಿವೃದ್ಧಿಗೆ ಸಹಕರಿಸಿಬೇಕಿದೆ. ಕನ್ನಸಂದ್ರ ಶಾಲೆ ಪ್ರತಿ ವರ್ಷ 20ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಅಭಿವೃದ್ಧಿಗೆ ಶಾಸಕ ಎ.ಮಂಜುನಾಥ್, ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ:- She said YES..! ಆ್ಯಶಸ್ ಪಂದ್ಯದಲ್ಲಿ ಹೀಗೊಂದು ಪ್ರೇಮ ಪ್ರಸಂಗ: ವಿಡಿಯೋ
“ಶಾಲೆಯ ಕೊಠಡಿಗಳ ಸಮಸ್ಯೆ ಕುರಿತಂತೆ ಈಗಾಗಲೇ ಹಲವು ಬಾರಿ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದೇವೆ. ಇಲಾಖೆಯಲ್ಲಿ ಅನುದಾನ ಬಿಡುಗಡೆ ಯಾದ ಕೂಡಲೇ ಕೊಠಡಿ ದುರಸ್ತಿಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.” ● ಸ್ವರ್ಣಗೌರಾಂಬಿಕೆ, ಶಿಕ್ಷಕಿ
“ಕನ್ನಸಂದ್ರ ಕಾಲೋನಿಯಲ್ಲಿರುವ ಶಾಲೆ ಕೊಠಡಿ ಹೊಸದಾಗಿ ನಿರ್ಮಿಸಿ. ಇಲ್ಲ ದುರಸ್ತಿಗೊಳಿಸಿ ಎಂದು 2015ರಿಂದಲೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಮಕ್ಕಳಿಗೆ ಏನಾದರೂ ಆದರೆ ಶಿಕ್ಷಣ ಇಲಾಖೆಯೇ ಹೊಣೆ.” ● ರವಿಕುಮಾರ್, ಮಾಜಿ ಗ್ರಾಪಂ ಸದಸ್ಯ
– ಕೆ.ಎಸ್.ಮಂಜುನಾಥ್, ಕುದೂರು