Advertisement

Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ

02:09 AM Dec 28, 2024 | Team Udayavani |

ಬೆಂಗಳೂರು: “ನಶಿಸಿ ಹೋಗುತ್ತಿರುವಂತಹ ಅಪರೂಪದಲ್ಲಿ ಅಪರೂಪದ, ಶ್ರೇಷ್ಠರಲ್ಲಿ ಶ್ರೇಷ್ಠವಾದ ಹವ್ಯಕ ತಳಿ ಉಳಿಸಿ. ಹವ್ಯಕರಿಗೆ ಮಕ್ಕಳು ಬೇಡವಾದರೆ ಪರವಾಗಿಲ್ಲ; ನೀವು ಮೂರನೇ ಮಗು ಪಡೆದುಕೊಳ್ಳಿ. ಆ ಮೂರನೇ ಮಗುವಿನ ಜವಾಬ್ದಾರಿ ರಾಮಚಂದ್ರಾಪುರ ಮಠದ್ದಾ ಗಿದೆ’ ಎಂದು ಶ್ರೀ ರಾಮ ಚಂದ್ರಾಪುರ ಮಠದ ಶ್ರೀಮತ್‌ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಘೋಷಿಸಿದ್ದಾರೆ.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಉತ್ತರ ಪ್ರದೇಶದ ಅಹಿತ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪ ಬೆಳಗಿ ಸುವ ಮೂಲಕ ಚಾಲನೆ ನೀಡಿ ಶ್ರೀಗಳು ಮಾತ ನಾಡಿದರು.

ಇಂದು ಹವ್ಯಕರು ಅಳಿಯುತ್ತಿದ್ದಾರೆ. ನಮ್ಮ ಗುರುತುಅಳಿದು ಹೋಗಲು ಬಹಳ ಕಾಲಬೇಕಾಗಿಲ್ಲ. ಹವ್ಯಕರು 3, 4, 5ನೇ ಮಕ್ಕಳನ್ನೇ ಪಡೆದುಕೊಳ್ಳುವುದಾದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ,ಸೇರಿ ನಿಮ್ಮ ಮಕ್ಕಳು ಒಂದು ಸ್ಥಿತಿಗೆ ಬರುವ ಎಲ್ಲವನ್ನೂ ಅಂದರೆ ಮಠವೇ ಆ ಮಗು ವಿಗೆ ತಾಯಿ-ತಂದೆ ಆಗಲು ಸಿದ್ಧವಿದೆ. ಎಷ್ಟೆಷ್ಟೋ ಪರಂಪರೆ ಮುಗಿದಿವೆ. ಆದರೆ ಇಡೀ ಸಮಾಜ ಆ ವಿಷಯದಲ್ಲಿ ನಿದ್ರೆ ಮಾಡುತ್ತಿದೆ. ನೀವು ಸಮಾಜ ವರ್ಧಕರಾಗುವುದಾದರೆ ಮಠ ನಿಮ್ಮನ್ನು ಎತ್ತಿ ಹಿಡಿಯುತ್ತದೆ. ಇದರಿಂದ ಸಮಾಜ ಉಳಿಯುತ್ತಿದೆ ಎಂದು ಶ್ರೀಗಳು ಸಲಹೆ ನೀಡಿದರು.

ಹವ್ಯಕರ ಸಂಖ್ಯೆ ಕುಸಿತ
ನಾವು ಪೀಠಕ್ಕೆ ಬಂದು 30 ವರ್ಷಗಳಾಗಿರಬಹುದು. ಅಂದು ಇದ್ದ ಸಂಖ್ಯೆಯ ಅರ್ಧದಷ್ಟು ಹವ್ಯಕರು ಇಂದಿಲ್ಲ. ಯಾರು ಈ ಜನಸಂಖ್ಯಾ ನಿಯಂತ್ರಣದ ಸೂತ್ರವನ್ನು ಅಳವಡಿಸಿಕೊಂಡರೆ ದೇಶ, ಪ್ರಪಂಚಕ್ಕೆ ಒಳ್ಳೆಯ ದಿತ್ತೋ, ಅವರು ಅಳವಡಿಸಿಕೊಳ್ಳುತ್ತಿಲ್ಲ. ಆದರೆ ಯಾವ ತಳಿಯಿಂದ ಪ್ರಪಂಚಕ್ಕೆ ಶುಭವಿದೆಯೋ ಅವರು ಈ ಸೂತ್ರ ಅಳವಡಿಸಿಕೊಂಡಿದ್ದಾರೆ. ಅಪರೂಪದ ಗೋ ತಳಿ ಉಳಿಸುವ ಅಭಿಯಾನ ನಡೆಸುತ್ತಿದ್ದೆವು. ಆದರೆ ಇಂದು ಅಪರೂಪದ ಹವ್ಯಕ ತಳಿ ಉಳಿಸುವ ಅಭಿಯಾನ ಮಾಡುವ ಸಂದರ್ಭ ಬಂದಿದೆ ಎಂದು ಹೇಳಿದರು.

ಮಂತ್ರಾಲಯದ ಶ್ರೀ ರಾಘವೇಂದ್ರಮಠದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಮತ್ತು ಆದಿಚುಂಚನ ಗಿರಿಯ ಶ್ರೀ ಸೌಮ್ಯನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಹವ್ಯಕರು ಸಮ್ಮೇಳನಕ್ಕೆ ಸಾಕ್ಷಿಯಾದರು.

Advertisement

ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಮ್ಮೇಳನಾಧ್ಯಕ್ಷ ಗಿರಿಧರ ಕಜೆ, ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ, ಹೊರನಾಡು ಅನ್ನಪೂರ್ಣೇಶ್ವರೀ ದೇವಾಲಯದ ಮುಖ್ಯಸ್ಥ ಭೀಮೇಶ್ವರ ಜೋಶಿ, ಎಂಎಲ್‌ಸಿ ಕಿಶೋರ್‌ ವೇದಿಕೆ ಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next