Advertisement

ಅಗ್ನಿ ದುರಂತ : ಹವ್ಯಕ ಮಂಡಲಗಳ 40 ಸೇವಾ ಬಿಂದುಗಳಿಂದ ಶ್ರಮದಾನ

10:30 AM Mar 20, 2018 | Karthik A |

ಪೆರ್ಲ: ಮುಳ್ಳೇರಿಯ ಹವ್ಯಕ ಮಂಡಲದ ಎಣ್ಮಕಜೆ ವಲಯದ ನಿಷ್ಠಾವಂತ ಗುರು ಭಕ್ತ ಅಬರಾಜೆ ಘಟಕದ ಗುರಿಕ್ಕಾರ ಹಾಗೂ ಸೇವಾ ವಿಭಾಗದ ಪ್ರಧಾನ ಶಂಕರನಾರಾಯಣ ಪ್ರಕಾಶ ಅವರ ನಿವಾಸದಲ್ಲಿ ಇತ್ತೀಚೆಗೆ ಅನಿರೀಕ್ಷಿತ ಅಗ್ನಿದುರಂತ ಸಂಭವಿಸಿ ಹಟ್ಟಿ ಹಾಗೂ ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದ ನಾಶ ನಷ್ಟ ಉಂಟಾಗಿತ್ತು. ವಿವರವನ್ನರಿತು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಬರಾಜೆ ಕುಟುಂಬಕ್ಕೆ ಆಶೀರ್ವದಿಸಿ ಫಲ ಮಂತ್ರಾಕ್ಷತೆ ಹಾಗೂ ಸಂದೇಶವನ್ನು ನೀಡಿ ಕಳುಹಿಸಿಕೊಟ್ಟರು.

Advertisement

ಮಹಾಮಂಡಲ ಕಾರ್ಯದರ್ಶಿ‌ ಮೂಲಕ ಮಂಡಲ ಅಧ್ಯಕ್ಷ ಶ್ರೀಕೃಷ್ಣ ಭಟ್‌, ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀಕೃಷ್ಣ ಭಟ್‌ ಮೀನಗದ್ದೆ, ವಲಯ ಅಧ್ಯಕ್ಷ ಶಿವಪ್ರಸಾದ ವರ್ಮುಡಿ, ವಲಯ ಕಾರ್ಯದರ್ಶಿ ಶಂಕರ ಪ್ರಸಾದ ಕುಂಚಿನಡ್ಕ ಹಾಗೂ ಇತರರು ಅಬರಾಜೆ ಮನೆಗೆ ಭೇಟಿ ನೀಡಿ ಮನೆ ದೇವರ ಸಾನ್ನಿಧ್ಯದಲ್ಲಿ ಮುಂದಿನ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಎಣ್ಮಕಜೆ ವಲಯದ ನೇತೃತ್ವದಲ್ಲಿ ಪಳ್ಳತ್ತಡ್ಕ, ಪೆರಡಾಲ, ಈಶ್ವರ ಮಂಗಲ ವಲಯದ ಸೇವಾ ಬಿಂದುಗಳ ನೇತೃತ್ವದಲ್ಲಿ ಶ್ರಮದಾನವನ್ನು ನಡೆಸಲಾಯಿತು. 40ಕ್ಕೂ ಹೆಚ್ಚು ಸೇವಾ ಬಿಂದುಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next