Advertisement

ರಾಣೆಬೆನ್ನೂರು: ಪುರಾತನ ಸ್ಪಟಿಕಲಿಂಗ ಕಳ್ಳತನ

12:01 PM Jun 07, 2022 | Team Udayavani |

ಹಾವೇರಿ: ಪುರಾತನ ಕಾಲದ ಸ್ಪಟಿಕಲಿಂಗ ಕಳ್ಳತನವಾದ ಘಟನೆ ರಾಣೆಬೆನ್ನೂರು ತಾಲೂಕಿನ ಲಿಂಗದಳ್ಳಿ ಹಿರೇಮಠದಲ್ಲಿ ನಡೆದಿದೆ.

Advertisement

ಲಿಂಗದಹಳ್ಳಿ ಹಿರೇಮಠದಲ್ಲಿದ್ದ ಸ್ಪಟಿಕಲಿಂಗ ಸುಮಾರು 8ನೇ ಶತಮಾನದ ಕಾಲದ್ದು ಎನ್ನಲಾಗುತ್ತಿದ್ದು, ಮಠದಲ್ಲಿ ಸ್ವಾಮೀಜಿಗಳು ಇಲ್ಲದ ವೇಳೆ ಕೊಂಚುಹಾಕಿ ಕಳ್ಳತನ ಮಾಡಲಾಗಿದೆ ಎಂದು ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಕಲ್ಲು ತೂರಿ ಪರಾರಿಯಾಗಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಸ್ಪಟಿಕಲಿಂಗ ಕಳ್ಳತನ ಆಗಿರುವ ವಿಷಯ ತಿಳಿಯುತ್ತಿದ್ದಂತೆ ಭಕ್ತಾದಿಗಳು ಮಠಕ್ಕೆ ಆಗಮಿಸುತ್ತಿದ್ದಾರೆ. ಘಟನೆ ಕುರಿತು ರಾಣೆಬೆನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next