Advertisement

ಹಾವೇರಿ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಜಾಕ್ಕೆ ಒತ್ತಾಯ

06:08 PM Aug 01, 2024 | Team Udayavani |

■ ಉದಯವಾಣಿ ಸಮಾಚಾರ
ಹಾವೇರಿ: ಅಹಿಂದ ಹೆಸರಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಎಸ್‌ಟಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್‌ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಜೆಡಿಎಸ್‌ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಎಸ್‌ಟಿ ಘಟಕದ ಅಧ್ಯಕ್ಷ ಮಂಜುನಾಥ ಕನ್ನಾಯ್ಕನವರ ನೇತೃತ್ವದಲ್ಲಿ
ಬುಧವಾರ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣವನ್ನು ಸಿಬಿಐಗೆ ಒಪ್ಪಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ವಜಾ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಖಾತೆ ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಎಸ್‌ಟಿ ನಿಗಮಕ್ಕೆ ಹಣ ಮಂಜೂರು ಮಾಡಿದ್ದಾರೆ.

ಸಚಿವ ಸ್ಥಾನದಲ್ಲಿದ್ದ ನಾಗೇಂದ್ರ, ನಿಗಮದ ಅಧ್ಯಕ್ಷ ಬಸವಗೌಡ ದದ್ದಲ್‌ ಇವರಷ್ಟೇ ರಾಜೀನಾಮೆ ನೀಡಿದರೆ ಸಾಲದು, ಹಗರಣದ ರುವಾರಿಗಳಾದ ಸಿಎಂ ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಹಗರಣದಲ್ಲಿ ಮುಳಗಿರುವ ಕಾಂಗ್ರೆಸ್‌ ಸರ್ಕಾರ ವಜಾಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ಒತ್ತಾಯಿಸಿದರು.

ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ ಕನ್ನಾಯ್ಕನವರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಹೇಳಿ ಆಡಳಿತಕ್ಕೆ ಬಂದು ಒಂದು ವರ್ಷ ಕಳೆಯುತ್ತಿದ್ದಂತೆ ಎಸ್‌ಟಿ ನಿಗಮದಲ್ಲಿ 187 ಕೋಟಿ ರೂ., ಹಣ ಲೂಟಿ ಮಾಡಿದೆ. ಇದನ್ನು ರಾಜ್ಯದ ಅಹಿಂದ ಜನತೆ ಎಂದು ಕ್ಷಮಿಸುವುದಿಲ್ಲ.

ಇದಲ್ಲದೇ ಅನೇಕ ಜನಾಂಗದ ನಿಗಮಗಳಲ್ಲೂ ಹಗರಣಗಳಾಗಿದೆ. ಇಂತಹ ಸರ್ಕಾರ ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿದೆ. ಭ್ರಷ್ಟಾಚಾರ ಮಾಡಿರುವವರೂ ಯಾರೇ ಆಗಿರಲಿ ಅವರಿಗೆ ತಕ್ಷ ಶಿಕ್ಷೆಯಾಗಬೇಕು. ಎಸ್‌ಟಿ ಜನಾಂಗದ ಹಣವನ್ನು ರಿಕವರಿ ಮಾಡಿ ರಾಜ್ಯದ ಎಸ್ಟಿ ಜನಾಂಗ ಕಲ್ಯಾಣ ನಿಧಿಯನ್ನು ಆ ಸಮುದಾಯಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

Advertisement

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಸಿದ್ಧಬಸಪ್ಪ ಯಾದವ್‌, ಅಲ್ತಾಪ್‌ ನದಾಫ್‌, ರಾಮನಗೌಡ್ರ ಪಾಟೀಲ, ಸತೀಶ ಮಾಳದಕರ, ಈರಣ್ಣ
ನವಲಗುಂದ, ರಮೇಶ ಮಾಕನೂರ, ಮೋಹಮ್‌ ಬಿನ್ಹಾಳ, ರೀಠಾ ನಾಯ್ಕರ್‌, ಎಂ.ಎಸ್‌. ಹಣಗಿ, ಲಲಿತಾ ಉಜ್ಜನಗೌಡ್ರ, ಭರಮಣ್ಣಕೊಳಚಿ, ಬಿ.ಸಿ. ಗುದ್ದಿಶೆಟ್ಟರ, ಸಿದ್ಧಣ್ಣ ಗುಡಿಮುಂದ್ಲರ್‌, ಅಮೀರಜಾನ್‌ ಬೇಪಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next