Advertisement

ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸಿ

03:28 PM Sep 22, 2021 | Team Udayavani |

ರಾಣಿಬೆನ್ನೂರ: ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಆದಿಜಾಂಬವಮಾದಿಗ ಸಮುದಾಯಕ್ಕೆ ಸಾಮಾಜಿಕನ್ಯಾಯ ಎನ್ನುವುದು ಮರೀಚಿಕೆಯಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಸರ್ವೋತ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಒಳ ಮೀಸಲಾತಿಯ ಮೂಲಕ ಜಾರಿಗೊಳಿಸಿ ಸಮಾಜಕ್ಕೆ ನ್ಯಾಯಕೊಡಿಸಲು ಸರ್ಕಾರ ಮುಂದಾಗಬೇಕೆಂದುಹಾವೇರಿ ಜಿಲ್ಲಾ ಆದಿಜಾಂಬವ ಸಲಹಾಸಮಿತಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಆಗ್ರಹಿಸಿದರು.

ಮಂಗಳವಾರ ಇಲ್ಲಿನ ವಾಗೀಶ ನಗರದಕೋಳಿವಾಡರ ನಿವಾಸದ ಎದುರುಸಾಂಕೇತಿಕವಾಗಿ ಧರಣಿ ನಡೆಸಿ, ಮಾಜಿಸಭಾಪತಿ ಕೆ.ಬಿ.ಕೋಳಿವಾಡ ಅವರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದರು.

ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರಿಗೂಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದೆ.ಸಮಾಜಕ್ಕೆ ನ್ಯಾಯ ಕೊಡಿಸಲು ಕಾಂಗ್ರೆಸ್‌ಪಕ್ಷ ಸಮಾಜವನ್ನು ಬೆಂಬಲಿಸಬೇಕುಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ ಅವರಿಗೆ ಈ ಮನವಿ ಪತ್ರಅರ್ಪಿಸಿ ಹೋರಾಟಕ್ಕೆ ಸಹಕರಿಸಬೇಕು ಎಂದುಒತ್ತಾಯಿಸಿದರು.

ಒಳ ಮೀಸಲಾತಿಯನ್ನು ವರ್ಗಿಕರಿಸುವಮೂಲಕ ಜಾರಿಗೊಳಿಸಬೇಕು. ಜಿಲ್ಲೆಯಮಾದಿಗ ಸಮಾಜದವರನ್ನು ಎಂಎಲ್‌ಸಿಮಾಡಬೇಕು. 2023ನೇ ವಿಧಾನಸಭಾಚುನಾವಣೆಯಲ್ಲಿ ಹಾವೇರಿ ಮೀಸಲುಕ್ಷೇತ್ರಕ್ಕೆ ಮಾದಿಗ ಸಮಾಜದವರಿಗೆ ಸ್ಪರ್ದಿಸಲುಅವಕಾಶ ಕಲ್ಪಿಸಬೇಕು. ಜಿಲ್ಲೆಯ 38 ಜಿಪಂಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ 6 ಕ್ಷೇತ್ರಗಳನ್ನುಈ ಸಮಾಜಕ್ಕೆ ಮೀಸಲಿರಿಸಬೇಕು.

Advertisement

ಈ ಸಮಾಜಕ್ಕೆ ತಾಪಂ ಚುನಾವಣೆಯಲ್ಲಿ 8ತಾಲೂಕುಗಳಲ್ಲಿ 16 ಕ್ಕೂ ಅಧಿಕ ಮೀಸಲುಕ್ಷೇತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.ಮನವಿ ಪತ್ರ ಸ್ವೀಕರಿಸಿದಮಾಜಿ ಸಭಾಪತಿ ಕೆ.ಬಿ.ಕೋಳಿವಾಡಅವರು ಮಾತನಾಡಿ, ಕಾಂಗ್ರೆಸ್‌ ಪಕ್ಷ ಕಳೆದ7 ದಶಕಗಳಿಂದ ಸಮಾಜಕ್ಕೆ ಬೆಂಬಲವಾಗಿನಿಂತಿದೆ.

ಸಮಾಜದ ಏಳ್ಗೆಗೆ ಅನೇಕಯೋಜನೆಗಳನ್ನು ಜಾರಿಗೊಳಿಸಿ ಅವಕಾಶಕಲ್ಪಿಸಿದೆ. ಸಮಾಜಕ್ಕೆ ಆಗುತ್ತಿರುವ ಅನ್ಯಾಯಸರಿಪಡಿಸಿ ನ್ಯಾಯ ದೊರಕಿಸಿಕೊಡಲುಕೆಪಿಸಿಸಿ ಅಧ್ಯಕ್ಷರಿಗೆ, ವಿಪ ನಾಯಕರಿಗೆ ಹಾಗೂಪಕ್ಷದ ಹಿರಿಯ ನಾಯಕರಿಗೆ ಈ ಮನವಿ ಪತ್ರಅರ್ಪಿಸಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಸಮಿತಿ ಜಿಲ್ಲಾಧ್ಯಕ್ಷ ಸಂಜಯಗಾಂಧಿಕರಿತಿಮ್ಮಣ್ಣನವರ, ಜಿಲ್ಲಾ ಕಾರ್ಯಾಧ್ಯಕ್ಷಪುಟ್ಟಪ್ಪ ಮರಿಯಮ್ಮನವರ, ನಗರಸಭಾ ಸದಸ್ಯಪ್ರಕಾಶ ಪೂಜಾರ, ನಿಂಗಪ್ಪ ಕಡೂರು, ರಘುಆಡೂರ, ಪಾರ್ವತಿ ಗೋಡಿಬಸಮ್ಮನವರ,ಗುತ್ತೆಪ್ಪ ಹರಿಜನ, ಮೈಲಪ್ಪ ದಾಸಪ್ಪನವರ,ರೇಣುಕಾ ಮುದ್ದಿಬಸಮ್ಮನವರ, ಮೈಲಪ್ಪಗೋಣಿಬಸಮ್ಮನವರ, ಫಕ್ಕೀರಪ್ಪ ಬೆಳ್ಳೂಡಿ,ವೆಂಕಟೇಶ ಹಲ್ಡಲ್ಡರ, ನಾಗರಾಜಮರಿಯಮ್ಮನವರ ಸೇರಿದಂತೆನೂರಕ್ಕೂ ಹೆಚ್ಚುಜನರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next