Advertisement

ಹಾವೇರಿ ಘಟನೆ ಸಂಘಟನಾತ್ಮಕ ಅಪರಾಧ: ಮಾಳವಿಕಾ ಅವಿನಾಶ್

01:19 PM Jan 14, 2024 | Team Udayavani |

ಹಾವೇರಿ: ಹಾವೇರಿ ಘಟನೆ ಸಂಘಟನಾತ್ಮಕ ಅಪರಾಧ. ಜನವರಿ 8ರಂದು ನಡೆದ ಪ್ರಕರಣ ಹತ್ತವರೆಗೆ ಪ್ರಕರಣ ಆಗಿಲ್ಲ, ಆಕೆ ಭಯಬೀತಳಾಗಿದ್ದಾಳೆ. ಕೇವಲ ಒಂದು ಕೇಸ್ ಅಲ್ಲ, ಬೆಳಕಿಗೆ ಬಾರದ ಹಲವು ಪ್ರಕರಣಗಳು ನಡೆದು ಹೋಗಿವೆ. ರೇಪ್ ಕೇಸ್ ನಲ್ಲಿ ನಾವು ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ನವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಮುಂದೆ ಆಕೆ ಹೇಳಿಕೆ ನೀಡಲು ಯಾಕೆ ಹೆದರಿದಳು? ನೈತಿಕ ಪೊಲೀಸ್ ಗಿರಿ ಮಾಡುವ ಇವರ ಬಗ್ಗೆ ಸಿಎಂ ಏನು ಹೇಳುತ್ತಾರೆ ಹೊಟಲ್ ಗೆ ನುಗ್ಗಿ ಸಂತ್ರಸ್ತೆಗೆ ಥಳಿಸಿದ್ದಾರೆ. ನಂತರ ಆಕೆಯನ್ನು ಬೇರೆಡೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾರೆ. ಇಂತಹ ಕೃತ್ಯ ನಡೆದಾಗ ಎಸ್ ಐಟಿ ತಂಡ ಬರಬೇಕಿತ್ತು, ಬಂದಿದೆಯಾ.? ನಾವು ಭೇಟಿ ಬರುತ್ತೇವೆ ಎಂದು ಗೊತ್ತಾದ ಕೂಡಲೇ ಆಕೆಯನ್ನು ಇಲ್ಲಿಂದ ಬೇರೆಡೆ ಶಿಫ್ಟ್ ಮಾಡಿದ್ದಾರೆ. ಸಂತ್ರಸ್ತೆ ಈಗ ಎಲ್ಲಿದ್ದಾರೆಂದು ಗೊತ್ತಿಲ್ಲ. ಆಕೆಯ ಆರೋಗ್ಯ ಸುಧಾರಿಸಿಲ್ಲ, ಇಂತಹ ಸಂದರ್ಭದಲ್ಲಿ ಆಕೆಯನ್ನು ತನಿಖೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯಾಧಾರಗಳು ಸಿಕ್ಕಿವೆ. ಅಕ್ಕಿಆಲೂರಲ್ಲಿ ಸೂಫಿ ಫೋರಂ ಯಾರು ಅಂದರೆ ಗೊತ್ತಾಗುತ್ತದೆ. ಈವರೆಗೆ ಎಸ್ ಐಟಿ ಫಾರ್ಮ್ ಆಗಿಲ್ಲವೇ ಕೆ? ಸಿಎಂ ಮತ್ತು ಕಾಂಗ್ರೆಸ್ ಸರಕಾರ ಓಲೈಕೆ ರಾಜಕಾರಣ ಮಾಡುವುದು ಒಂದು ಜನಾಂಗದ ಬಗ್ಗೆ, ಹೀಗಾಗಿ ಸೂಫಿ ಫೋರಂನವರಿಗೆ ಯಾಕೆ ಧೈರ್ಯ ಬಂತು? ಬೇರೆ ಜನಾಂಗದವರು ನೈತಿಕ ಪೊಲೀಸ್ ಗಿರಿ ಮಾಡಿದರೆ ಇವರು ಸುಮ್ಮನೆ ಇರುತ್ತಾರಾ. ಹೆಣ್ಣು ಮಗಳು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next