Advertisement

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

12:38 PM Apr 29, 2024 | Team Udayavani |

ಹಾವೇರಿ: ಈಗಾಗಲೇ ಚುನಾವಣೆ ನಡೆದಿರುವ ರಾಜ್ಯದ 14ರಲ್ಲಿ 14 ಸ್ಥಾನವನ್ನು ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ನಿಚ್ಛಳವಾಗಿದೆ. ಎರಡು ಕ್ಷೇತ್ರಗಳಲ್ಲಿ ಮಾತ್ರ ನೇರ ಹಣಾಹಣಿ ಬಿಟ್ಟರೆ ಎಲ್ಲ ಕಡೆ ಸುಲಭವಾದ ಗೆಲುವು ಆಗಲಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಕ್ಷೇತ್ರದಿಂದ ಬೊಮ್ಮಾಯಿ‌ ಸ್ಪರ್ಧಿಸಿದ್ದಾರೆ. ಕೊಡಗು ಮತ್ತು ಮೈಸೂರು ಭಾಗದಲ್ಲಿ ನಾನು ಕೆಲಸ ಮಾಡಲು ಜನ ಮೆಚ್ಚುಗೆ ಪಡೆಯಲು ಮೋದಿ ಅವರಷ್ಟೇ ಬೊಮ್ಮಾಯಿ‌ ಅವರು ಕಾರಣ. ನನ್ನ ಕ್ಷೇತ್ರಕ್ಕೆ ಅನೇಕ‌ ಯೋಜನೆಗಳನ್ನು ಕೊಟ್ಟಿದ್ದಾರೆ. ಅಭಿವೃದ್ಧಿ ಗುರಿಯಾಗಿ ಇಟ್ಟುಕೊಂಡು ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದಾರೆ. ಹಾವೇರಿ ಜಿಲ್ಲೆಗೆ ಮೆಡಿಕಲ್‌ ಕಾಲೇಜು, ಕೆಎಂಎಫ್ ಯುನಿಟ್ ತಂದಿದ್ದಾರೆ. ಜಲಜೀವನ ಮಿಷನ್ ರಾಜ್ಯದಲ್ಲಿ ನಡೆಯುತ್ತಿದ್ದರೆ ಅದಕ್ಕೆ ಬೊಮ್ಮಾಯಿ‌ ಕಾರಣ ಎಂದರು.

ಮೇ 7ರಂದು ನೀವು ಮತ ಹಾಕುವುದು ಕೇವಲ ಒಬ್ಬ ಸಂಸದ ಆಗುವವರಿಗಲ್ಲ. ಕೇಂದ್ರ ಸಚಿವರಿಗೆ. ವಿಷನರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು ಬೊಮ್ಮಾಯಿ‌. ಕೆಲ ಕಾರಣಗಳಿಂದ ಹಿಂದಿನ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಮೇಕೆದಾಟು, ಕಳಸಾ ಬಂಡೂರಿ ವಿಚಾರದಲ್ಲಿ ಮುಂದಡಿ ಇಟ್ಟವರು ಬೊಮ್ಮಾಯಿ‌. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಅವರೇ ಬರಬೇಕು. ಎಚ್.ಡಿ.ದೇವೇಗೌಡರ ನಂತರ ನೀರಾವರಿ ಬಗ್ಗೆ ತಳಸ್ಪರ್ಶಿ ಅಧ್ಯಯನ ಹೊಂದಿರುವವರು ಬೊಮ್ಮಾಯಿ‌ ಅವರು ಮಾತ್ರ. ಇವರ ಗೆಲುವಿನಿಂದ ಭವಿಷ್ಯದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೂ ಅನುಕೂಲ ಆಗಲಿದೆ. ನೀರಾವರಿ ವಿಚಾರದಲ್ಲಿ ಅವರಿಗೆ ಸರಿಸಟಿ ಯಾರಿಲ್ಲ. ಕೇಂದ್ರದಲ್ಲಿ ನಿಂತು ಗಟ್ಟಿಯಾಗಿ ಮಾತನಾಡುವ, ಇಂಗ್ಲಿಷ್ ಹಾಗೂ ಹಿಂದಿ ಪ್ರೌಢಿಮೆ‌ ಇರುವವರು ಬೊಮ್ಮಾಯಿ‌ ಎಂದು ಪ್ರತಾಪ್ ಸಿಂಹ ಹೇಳಿದರು.

ಹಿಂದೂ ಫೈರ್ ಬ್ರಾಂಡ್ ಗಳಿಗೆ ಟಿಕೆಟ್ ಮಿಸ್ ವಿಚಾರವಾಗಿ ಮಾತನಾಡಿದ‌ ಸಿಂಹ, ಹಿಂದೂ ಫೈರ್ ಬ್ರಾಂಡ್ ಏನೇ ಹೇಳಿ ಎಲ್ಲವನ್ನೂ ಪ್ರಬಲವಾಗಿ ಪ್ರತಿಪಾದಿಸುವ ಮೋದಿ ಕ್ಯಾಬಿನೆಟ್ ನಲ್ಲಿ ಇದ್ದಾರೆ. ನಮಗೆ ರಾಜ್ಯದಲ್ಲಿ ಓಡಾಡಿ ಎಂದಿದ್ದಾರೆ. ಬಹುಶಃ ರಾಜ್ಯ ರಾಜಕೀಯದಲ್ಲಿ ಅವಕಾಶ ಸಿಗಬಹುದು. ನನಗೆ ಸಂಘ ಮತ್ತು ಮೋದಿಜಿ ಟಿಕೆಟ್ ಕೊಟ್ಟಿದ್ದು. ಹತ್ತು ವರ್ಷ ಉತ್ತಮವಾದ ಕೆಲಸ ಮಾಡಿದ್ದೇನೆ. ರಾಜ್ಯದಲ್ಲೂ ಹಿಂದುಪರ ಕೆಲಸ‌ ಮಾಡಬೇಕಿದೆ. ಈಶ್ವರಪ್ಪ, ಶೆಟ್ಟರ್ ಬಹಳ ದೊಡ್ಡ ನಾಯಕರು ಅವರ ಬಗ್ಗೆ ಹೇಳಲು ನಾನು ಚಿಕ್ಕವನು ಎಂದರು.

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಈಗಾಗಲೇ ಎಸ್ ಐಟಿ ರಚನೆಯಾಗಿದೆ. ಎಚ್.ಡಿ.ಕೆ ಕೂಡ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next