Advertisement

Haveri: ಲಾಡ್ಜ್ ನಲ್ಲಿ ತಂಗಿದ್ದವರ ಮೇಲೆ ನೈತಿಕ ಪೊಲೀಸ್ ಗಿರಿ… ಇಬ್ಬರ ಬಂಧನ

07:20 PM Jan 10, 2024 | sudhir |

ಹಾವೇರಿ: ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದ ಅನ್ಯ ಕೋಮಿನ ವ್ಯಕ್ತಿ ಮತ್ತು ಮಹಿಳೆ ಮೇಲೆ ಮುಸ್ಲಿಂ ಯುವಕರು ದಾಳಿ ಮಾಡಿ ಹಿಗ್ಗಾ-ಮುಗ್ಗಾ ಥಳಿಸಿ ನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್‌ನಲ್ಲಿ ನಡೆದಿದೆ.

Advertisement

ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ಲಾಡ್ಜ್‌ನಲ್ಲಿ ಶಿರಸಿ ಮೂಲದ ಹಿಂದು ವ್ಯಕ್ತಿ ಹಾಗೂ ವಿವಾಹಿತ ಮುಸ್ಲಿಂ ಮಹಿಳೆ ಸೋಮವಾರ ಮಧ್ಯಾಹ್ನದ ವೇಳೆಗೆ ರೂಮ್‌ ಪಡೆದು ವಾಸವಾಗಿದ್ದಾರೆ. ಬುರ್ಕಾ ಹಾಕಿಕೊಂಡು ಅನ್ಯಕೋಮಿನ ಪುರುಷನ ಜತೆ ಲಾಡ್ಜ್‌ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಗಮನಿಸಿದ್ದ ಆಟೋ ಚಾಲಕ ಮುಸ್ಲಿಂ ಸಮುದಾಯದ ಯುವಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಅರ್ಧಗಂಟೆಯಲ್ಲೇ ಜಮಾಯಿಸಿದ ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರ ತಂಡ ಲಾಡ್ಜ್‌ನ ಕೊಠಡಿಗೆ ತೆರಳಿ ರೂಮ್‌ನಲ್ಲಿ ನೀರಿನ ಸಮಸ್ಯೆ ಇದೆ. ಸರಿಪಡಿಸಬೇಕು ಬಾಗಿಲು ತೆಗೆಯಿರಿ ಎಂದಿದ್ದಾರೆ. ಆಗ ಒಳಗಿದ್ದವರು ನೀರು ಬರುತ್ತಿದೆ ಎಂದರೂ ಪದೆಪದೇ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆದ ತಕ್ಷಣ ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಅಲ್ಲದೇ ಮಹಿಳೆಯನ್ನು ಎಳದಾಡಿ ಬಟ್ಟೆ ಹರಿದು ಹೊಡೆದಿರುವ ವಿಡಿಯೂ ವೈರಲ್ ಆಗಿದ್ದು, ದೂರು ಸಹ ದಾಖಲಾಗಿದೆ.

ಘಟನೆ ಸೋಮವಾರ ನಡೆದಿದ್ದರೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಲಾಡ್ಜ್ ನ ರೂಮ್ ಬಾಯ್ ಬುಧವಾರ ಲಾಡ್ಜ್‌ನಲ್ಲಿ ದಾಂಧಲೆ ನಡೆಸಿರುವ ಕುರಿತು ಹಾನಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಅಕ್ಕಿಆಲೂರಿನ ಅಪ್ತಾಬ ಚಂದನಕಟ್ಟಿ, ಮದರಸಾಬ ಮಹಮ್ಮದ್ ಇಸಾಕ್ ಮಂಡಕ್ಕಿ, ಸಮೀವುಲ್ಲಾ ಲಾಲನವರ ಸೇರಿ ಐವರ ಮೇಲೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅಪ್ತಾಬ ಚಂದನಕಟ್ಟಿ, ಮದರಸಾಬ ಮಂಡಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next