Advertisement

ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು

09:18 AM Aug 10, 2022 | Team Udayavani |

ಹಾವೇರಿ: ಮನೆಯ ಗೋಡೆ ಕುಸಿದು ಯುವಕನೋರ್ವ ಮೃತಪಟ್ಟ ಘಟನೆ ಶಿಗ್ಗಾವಿ ತಾಲೂಕಿನ ಕುನ್ನೂರ ಗ್ರಾಮದ ಪ್ಲಾಟ್ ನಲ್ಲಿ ಜರುಗಿದೆ.

Advertisement

ಮುಸ್ತಾಕ್ ಷರೀಫ್ ಸಾಬ ಯರಗುಪ್ಪಿ (27)ಮೃತಪಟ್ಟ ದುರ್ದೈವಿ. ನಿರಂತರ ಮಳೆ ಸುರಿಯುತ್ತಿದ್ದ ಹಿನ್ನಲೆ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ. ತೀವ್ರ ಗಾಯಗೊಂಡ ಇವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮನೆಯು ತೀವ್ರ ಶಿಥಿಲಗೊಂಡಿದ್ದರಿಂದ ಗೋಡೆಯು ಕುಸಿತಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಮಹಿಳೆ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next