Advertisement
ತಾಲೂಕಿನ ಶಿವಾಜಿ ನಗರದ(ಹೊಸ ಶಿಡೇನೂರ) ಪಾಂಡಪ್ಪ ಮಾನಪ್ಪ ಕಬ್ಬೂರ, ಗುರುಶಾಂತಪ್ಪ ಮೋಟಲೆಪ್ಪ ಲಮಾಣಿ, ಗಂಗವ್ವ ಟಾಕರೆಪ್ಪ ಕಬ್ಬೂರ, ಹನುಮಂತಪ್ಪ ದೊಡ್ಡಪುಟ್ಟಪ್ಪ ಬಡಿಗೇರ ಎಂಬುವರು ವಿಷ ಸೇವಿಸಿದ್ದು ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
Related Articles
Advertisement
ದಲಿತ ಕುಟುಂಬಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಮಂಜುನಾಥ ಬೋವಿ, ರಮೇಶ ಮೋಟೆಬೆನ್ನೂರ ಮುಂತಾದ ಮುಖಂಡರು ಸಾಂತ್ವನ ಹೇಳಲು ಮುಂದಾದರು. ಸ್ಥಳಕ್ಕೆ ತೆರಳಿದ ಹಿರಿಯ ಪೊಲೀಸ್ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಸದರಿ ಜಮೀನನ್ನು ಕಳೆದ ಐದಾರು ದಶಕಗಳಿಂದ ಸ್ವತಃ ನಾವೇ ಉಳುಮೆ ಮಾಡುತ್ತಾ ಬಂದಿದ್ದೇವೆ. 2008ರಲ್ಲಿ ಹಕ್ಕುಪತ್ರ ಪಡೆದಿದ್ದೇವೆ. ಜಮೀನು ಉಳುಮೆ ಮಾಡಲು ನೆಹರು ಓಲೇಕಾರ ಕುಟುಂಬದವರು ಬಿಡುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಓಲೇಕಾರ ಕುಟುಂಬಕ್ಕೆ ಬುದ್ಧಿವಾದ ಹೇಳಿ ದಲಿತರಿಗೆ ನ್ಯಾಯ ಒದಗಿಸಿಕೊಡಬೇಕು. –ಕುಮಾರ ಗುರುಶಾಂತಪ್ಪ ಲಮಾಣಿ, ಗ್ರಾ.ಪಂ. ಸದಸ್ಯ
ಶಿವಾಜಿ ನಗರದ ದಲಿತ ಕುಟುಂಬಗಳಿಗೆ ನನ್ನ ಅಧಿಕಾರವಧಿಯಲ್ಲಿ ಭೂಮಿ ಕೊಡಿಸಿದ್ದೆ. ಆದರೆ, ನಾನಾಗಲಿ ಅಥವಾ ನನ್ನ ಕುಟುಂಬದಿಂದ ಭೂಮಿ ಬಿಟ್ಟು ಕೊಡುವಂತೆ ಯಾರಿಗೂ ಹೇಳಿಲ್ಲ. ಕಾಂಗ್ರೆಸ್‌ನವರ ಕ್ಷುಲ್ಲಕ ರಾಜಕಾರಣ ಹಾಗೂ ಮುಖಂಡ ಎಸ್.ಆರ್. ಪಾಟೀಲ ಕುಮ್ಮಕ್ಕಿನಿಂದ ಘಟನೆ ನಡೆದಿದೆ. ದಲಿತ ರೈತರೊಂದಿಗೆ ಮಾತನಾಡಿ ಸರಿಪಡಿಸುತ್ತೇನೆ. –ನೆಹರು ಓಲೇಕಾರ, ಹಾವೇರಿ ಶಾಸಕ
ರಾಜಕೀಯ ಪ್ರಭಾವದಿಂದ ದಲಿತ ರೈತ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ನೀವು ಇಂತಿಷ್ಟೇ ಭೂಮಿ ತೆಗೆದುಕೊಳ್ಳಿ ಎಂದು ಹೇಳಲು ನೆಹರು ಓಲೇಕಾರ ಅಥವಾ ಅವರ ಕುಟುಂಬಕ್ಕೆ ಅಧಿಕಾರ ಕೊಟ್ಟವರ್ಯಾರು? ಪ್ರಕರಣದ ಹಿಂದಿರುವ ವ್ಯಕ್ತಿಗಳ ಹಾಗೂ ಅವರ ಉದ್ದೇಶಗಳ ಬಗ್ಗೆ ಉನ್ನತ ಮಟ್ಟದ ತನಿಖೆಯಿಂದ ಸತ್ಯ ಹೊರ ಬರಬೇಕು. ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. –ಎಸ್.ಆರ್.ಪಾಟೀಲ, ಕಾಂಗ್ರೆಸ್ ಮುಖಂಡ