Advertisement

ಬಾಲಿವುಡ್‌ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್‌ ಅಣ್ಣ-ತಂಗಿ

08:12 PM Nov 29, 2021 | Team Udayavani |

ಟಿಕ್‌ಟಾಕ್‌ಗೆ ನಿರ್ಬಂಧ ಹೇರಿದ ನಂತರ ಇನ್‌ಸ್ಟಾಗ್ರಾಂ ರೀಲ್ಸ್‌ ಹೆಚ್ಚೇ ಜನಪ್ರಿಯವಾಗಿದೆ. ಭಾರತದ ಎಲ್ಲ ಸಿನಿ ಹಾಡುಗಳು, ಡೈಲಾಗ್‌ಗಳು ಇನ್‌ಸ್ಟಾದಲ್ಲಿ ವೈರಲ್‌ ಆಗಿವೆ. ವಿಶೇಷವೆಂದರೆ ಭಾರತೀಯರು ಮಾತ್ರವಲ್ಲದೆ, ವಿದೇಶಿಗರು ಕೂಡ ಭಾರತೀಯ ಹಾಡುಗಳ ಸಾಹಿತ್ಯಕ್ಕೆ ಲಿಪ್‌ ಸಿಂಕ್‌ ಮಾಡಿದ್ದಾರೆ.

Advertisement

ಅದೇ ರೀತಿ ಆಫ್ರಿಕಾದ ತಾಂಜೇ ನಿಯಾದ ಅಣ್ಣ-ತಂಗಿ ಜೋಡಿ ಬಾಲಿವುಡ್‌ನ‌ ಶೇರ್‌ಶಾ ಸಿನಿಮಾದ “ರಾತನ್‌ ಲಂಬಿಯಾ’ ಹಾಡಿಗೆ ಲಿಪ್‌ ಸಿಂಕ್‌ ಮಾಡಿದ್ದು, ಅದೀಗ ವೈರಲ್‌ ಆಗಿದೆ. ಇಲ್ಲಿನ ಕಂಟೆಂಟ್‌ ಕ್ರಿಯೇಟರ್‌ ಕಿಲಿ ಪೌಲ್‌ ತಂಗಿಯೊಂದಿಗೆ ವಿಡಿಯೋದಲ್ಲಿ ಲಿಪ್‌ ಸಿಂಕ್‌ ಮಾಡಿದ್ದಾರೆ.

ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಹಿಂದಿಯ ಹಾಡಿಗೆ ಅಭಿನಯಿಸಿರುವ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಶೇರ್‌ಶಾ ಸಿನಿಮಾದ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಕೂಡ ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next