Advertisement

7ಡಿ ಸಿನಿಮಾ ನೋಡಿದ್ದೀರಾ?

12:26 PM Oct 21, 2017 | Team Udayavani |

7ಡಿ ಸಿನಿಮಾ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. 3ಡಿ ಸಿನಿಮಾ ಅಂದರೇನೆಂದು ಬಹುತೇಕರಿಗೆ ಗೊತ್ತೇ ಇರುತ್ತೆ. ಮೂವಿ ಪರದೆ ಮೇಲೆ ಮೂಡುವ ಚಿತ್ರಗಳು 3 ಆಯಾಮಗಳಲ್ಲಿ, ಸರಳವಾಗಿ ಹೇಳಬೇಕೆಂದರೆ ಕಣ್ಣಮುಂದೆಯೇ ನಡೆಯುತ್ತಿರುವಂತೆ ತೋರುತ್ತವೆ. ಆದರೆ 7ಡಿ ಬಗ್ಗೆ ಕೇಳಿದ್ದೀರಾ? 7ಡಿ ಬಗ್ಗೆ ತಿಳಿದುಕೊಳ್ಳೋ ಮುಂಚೆ 4ಡಿ, 5ಡಿ ಬಗ್ಗೆ ಹೇಳುವುದು ಸೂಕ್ತ. ನಗರದಲ್ಲಿ 4ಡಿ, 5ಡಿ ಸಿನಿಮಾಗಳ ಪ್ರದರ್ಶನ ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ.

Advertisement

ಈ ಸಿನಿಮಾಗಳ ವೈಶಿಷ್ಟವೆಂದರೆ, ಉದಾಹರಣೆಗೆ ಪರದೆ ಮೇಲೆ ಬಾಂಬ್‌ ಸಿಡಿದರೆ ಥಿಯೇಟರ್‌ನಲ್ಲಿ ನೀವು ಕೂತ ಸೀಟು ಕೂಡಾ ಅಲುಗಾಡುವುದು, ಸೊಂಡ್‌ ಎಫೆಕ್ಟ್ಗಳು ಎಷ್ಟು ಪರಿಣಾಮಕಾರಿ ಎಂದರೆ ನಿಮ್ಮ ಹತ್ತಿರದಲ್ಲೇ ಸ್ಫೋಟಿಸಿದ ಅನುಭವ ನಿಮ್ಮದಾಗುತ್ತದೆ. ಈ ರೀತಿ ರಿಯಲ್‌ ಎಫೆಕ್ಟುಗಳನ್ನು ಈ ಸಿನಿಮಾ ಥಿಯೇಟರ್‌ಗಳು ಒದಗಿಸುತ್ತವೆ.

7ಡಿ ಎಂದರೇನು?
ಸಿನಿಮಾ ವೀಕ್ಷಣೆಯ ನೆಕ್ಸ್ಟ್ ಲೆವೆಲ್‌ 7ಡಿ ಸಿನಿಮಾ. ಇಲ್ಲಿ ನಿಮ್ಮ ಕಣ್ಮುಂದೆ ನಡೆಯುತ್ತಿರುವ ದೃಶ್ಯಗಳಿಗನುಣವಾಗಿ ಥಿಯೇಟರ್‌ನಲ್ಲಿ ಎಫೆಕ್ಟುಗಳನ್ನು ಬಳಸಲಾಗುತ್ತದೆ. ತಣ್ಣೀರ ಸಿಂಚನ, ಬಿಸಿ ಗಾಳಿ, ಮಂಜಿನ ಎಫೆಕ್ಟು, ಇವೆಲ್ಲದರ ಜೊತೆಗೆ ಕಣ್ಮುಂದೆ ನಡೆಯುವ ದೃಶ್ಯಗಳನ್ನು ಪ್ರತಿಯೊಬ್ಬ ವೀಕ್ಷಕನೂ ನಿಯಂತ್ರಿಸಬಹುದಾಗಿದೆ. ಅದು ಹೇಗೆ ಸಾಧ್ಯವಾಗುತ್ತದೆಯೆಂದರೆ ಇಲ್ಲಿ ಪ್ರತಿ ಗ್ರಾಹಕರಿಗೂ ವರ್ಚುವಲ್‌ ಗಾಗಲ್ಸ್‌ಅನ್ನು ನೀಡಲಾಗುತ್ತದೆ. 

ಇಂಥ ರಿಯಲ್‌ ಅನುಭವವನ್ನು ನಿಮ್ಮದಾಗಿಸಿಕೊಳ್ಳಲು ಒಂದು ಅವಕಾಶ ಇಲ್ಲಿದೆ. ಇಲ್ಲಿನ ಥಿಯೇಟರ್‌ ರೋಬೋಟಿಕ್‌ ತಂತ್ರಜ್ಞಾನವನ್ನು ಹೊಂದಿದೆ. 4ಡಿ, 5ಡಿ ಸಿನಿಮಾಗಳ ಎಫೆಕ್ಟುಗಳನ್ನೂ ಒಳಗೊಂಡಿದೆ ಈ ಥಿಯೇಟರ್‌. ಮಳೆ, ಗಾಳಿ, ಸಿಡಿಲು, ಗುಡುಗನ್ನೂ ನೀವು ಸೀಟ್‌ನಲ್ಲಿ ಕುಳಿತುಕೊಂಡೇ ನೀವು ಅನುಭವಿಸಬಹುದು. 

ಎಲ್ಲಿ?: ಲೋನಾ ಎಂಟರ್‌ಟೇನ್ಮೆಂಟ್‌ ಪ್ರೈ. ಲಿ, ವರ್ಜಿನಿಯಾ ಮಾಲ್‌, ವೈಟ್‌ಫೀಲ್ಡ್‌
ಯಾವಾಗ?: ಅಕ್ಟೋಬರ್‌ 21-31 

Advertisement
Advertisement

Udayavani is now on Telegram. Click here to join our channel and stay updated with the latest news.

Next