Advertisement

ಪಾರದರ್ಶಕ-ನ್ಯಾಯಸಮ್ಮತ ಚುನಾವಣೆ ನಡೆಸಿ

07:58 PM Mar 24, 2021 | Team Udayavani |

ಮಸ್ಕಿ: ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಅಧಿ ಸೂಚನೆ ಪ್ರಕಟವಾಗಿದ್ದು, ಚುನಾವಣಾ ಆಯೋಗದ ನಿರ್ದೇಶಗಳನ್ವಯ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವಂತೆ ಜಿಲ್ಲಾ ಚುನಾವಣಾ ಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಮಸ್ಕಿ ತಾಪಂ ಸಭಾಂಗಣದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಚುನಾವಣೆ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಚುನಾವಣಾ ವೀಕ್ಷಕರು ಆಗಮಿಸಿದಾಗ ಅವರಿಗೆ ಮಸ್ಕಿ ವಿಧಾನಸಭೆ ಕ್ಷೇತ್ರದ ವರನಬಲ್‌ ಹಾಗೂ ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಸಂಪೂರ್ಣ ಮಾಹಿತಿ ನೀಡಬೇಕು. ಚುನಾವಣೆ ವೇಳೆ ಪೊಲೀಸ್‌ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಹಂತದಲ್ಲಿ ಸಭೆ ನಡೆಸಬೇಕು.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಬೇಕು ಎಂದರು. ವಿನಾಯತಿ ಪಡೆದವರನ್ನು ಹೊರತುಪಡಿಸಿ ಆಯುಧ ಹೊಂದಿದವರು ಎಲ್ಲರು ಕಡ್ಡಾಯವಾಗಿ ಅವುಗಳನ್ನು ಸ್ಥಳೀಯ ಠಾಣೆಯಲ್ಲಿ ಠೇವಣೆ ಮಾಡಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಚೆಕ್‌ ಪೋಸ್ಟ್‌ ಆರಂಭಿಸಿ ಸಿಸಿ ಟಿವಿ ಅಳವಡಿಸಬೇಕು.

ಅಂತಾರಾಜ್ಯ ಗಡಿ ಭಾಗದಲ್ಲೂ ಚೆಕ್‌ಪೋಸ್ಟ್‌ ಸ್ಥಾಪಿಸಿ ಸೂಕ್ತ ತಪಾಸಣೆ ಮಾಡಬೇಕು ಮತ್ತು ಕೋವಿಡ್‌ ತಪಾಸಣೆ ತಂಡ ಅಲ್ಲಿರಬೇಕು. ಜಾಗೃತ ದಳದವರು ಎಚ್ಚರಿಕೆಯಿಂದ ಕೆಲಸ ಮಾಡಿ. ಚುನಾವಣೆ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಲೆಕ್ಕದ ವಿವರಗಳನ್ನು ಅವರ ಖಾತೆಗೆ ಸಲ್ಲಿಸಬೇಕು. ಕಣ್ತಪ್ಪಿನಿಂದ ಯಾವುದೇ ಪ್ರಮಾದ ಆಗದಂತೆ ನೋಡಿಕೊಳ್ಳಿ. ಚುನಾವಣೆ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.

ಬಳಿಕ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿದರು. ಸಿಸಿಟಿವಿ ಕಾರ್ಯನಿರ್ವಹಣೆ, ಭದ್ರತೆ ಕೊಠಡಿ ಪರಿಶೀಲಿಸಿದರು. ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್‌ ಡಂಬಳ, ಮಸ್ಕಿ ತಹಶೀಲ್ದಾರ ಮಹೇಂದ್ರ, ತಾಪಂ ಇಒ ಬಾಬು ರಾಥೋಡ್‌, ಸಿಂಧನೂರು ತಹಶೀಲ್ದಾರ್‌ ಕವಿತಾ, ಪ್ರೋಬೆಷನ್‌ರಿ ಎಸಿ ಮಹೇಶ, ಮಸ್ಕಿ ಸಿಪಿಐ ದೀಪಕ್‌ ಬೋಸ್ಲೆ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next