Advertisement
1974ರಲ್ಲಿಯೇ ಪ್ರಾರಂಭವಾದ ಕಾಲ್ಬೆರಳ ಸ್ಪರ್ಧೆಯ ಹಿಂದೊಂದು ರೋಚಕ ಇತಿಹಾಸವಿದೆ. ಇದು ಪ್ರಾರಂಭವಾಗಿದ್ದು ಪೀಟ್ ಚೀತಮ್, ಎಡ್ಡೀ ಸ್ಟ್ಯಾನ್‌ಫೀಲ್ಡ್, ಡೀನ್ ಹಾಗೂ ಮೈಕ್ ಡಾಸನ್‌ಎಂಬ ನಾಲ್ಕು ಮಂದಿ ಸ್ನೇಹಿತರಿಂದ. ಇವರು ಬಾರೊಂದರಲ್ಲಿ ಕುಳಿತು ತಮ್ಮ ದೇಶಕ್ಕೆ ಈಚಿನ ದಿನಗಳಲ್ಲಿ ಯಾವೊಂದು ಚಾಂಪಿಯನ್‌ಶಿಪ್ ಪ್ರಶಸ್ತಿಗಳೂ ಬರಲಿಲ್ಲವೆನ್ನುವುದರ ಕುರಿತು ಮಾತಾಡಿಕೊಳ್ಳುತ್ತಿದ್ದರು.
Related Articles
Advertisement
ನಿಯಮಗಳು*ಸ್ಫರ್ಧೆಯಲ್ಲಿ ಭಾಗವಹಿಸುವವರ ಕಾಲುಗಳ ಪಾದ ಹಾಗೂ ಹೆಬ್ಬೆರೆಳುಗಳನ್ನು ಆಟಕ್ಕೂ ಕೆಲ ಗಂಟೆಗಳಷ್ಟು ಮೊದಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. *ಆಟದ ಸಮಯದಲ್ಲಿ ಅವರ ಶೂಗಳನ್ನಾಗಲಿ ಅಥವಾ ಕಾಲುಚೀಲಗಳನ್ನಾಗಲಿ ಧರಿಸುವಂತಿಲ್ಲ. *ಸ್ಪರ್ಧಿಗಳಿಬ್ಬರ ಪಾದಗಳನ್ನೂ ನೇರವಾಗಿ ಒಬ್ಬರ ಪಾದಗಳಿಗೆ ಮತ್ತೂಬ್ಬರ ಪಾದಗಳು ಸ್ಪರ್ಶಿಸುವಂತೆ ಆನಿಸಿ ಕಟ್ಟಲಾಗುತ್ತದೆ. *ಸ್ಪರ್ಧಿಗಳು ತಮ್ಮ ಹೆಬ್ಬೆರೆಳುಗಳಿಂದ ಮತ್ತೂಬ್ಬರ ಪಾದಗಳನ್ನು ಕೆಳಕ್ಕೆ ಬಾಗಿಸಲು ಪ್ರಯತ್ನಿಸಬೇಕು. ಕೆಲಸೆಕೆಂಡುಗಳಷ್ಟು ಕಾಲ ಯಾವ ಸ್ಪರ್ಧಿಯು ವಿರೋಧಿಯ ಪಾದಗಳನ್ನು ಬಾಗಿಸುತ್ತಾನೋ ಆತ ಪಂದ್ಯದಲ್ಲಿ ಜಯಗಳಿಸಿದಂತೆ. ಇದೇ ರೀತಿ ಒಮ್ಮೆ ಬಲಗಾಲಿನಲ್ಲಿ ಮತ್ತೂಮ್ಮೆ ಎಡಗಾಲಿನಲ್ಲಿ ಸೆಣೆಸಬೇಕಾಗುತ್ತದೆ. ಅಗತ್ಯವಿದ್ದರೆ ಮೂರನೇ ಪಂದ್ಯವನ್ನೂ ಆಡಬೇಕಾಗುತ್ತದೆ. ಮೂರರಲ್ಲಿ ಎರಡು ಬಾರಿ ಪಂದ್ಯ ಗೆದ್ದವರನ್ನುವಿಜೇತರೆಂದು ಘೋಷಿಸಲಾಗುತ್ತದೆ. ವಿಜೇತರಾದವರಿಗೆ ನಗದು ಪುರಸ್ಕಾರದ ಜೊತೆಗೆ ಹೆಬ್ಬೆರಳನ್ನು ಹೊಂದಿರುವ ಪಾದದ ರೂಪದ ಪಾರಿತೋಷಕವನ್ನು ನೀಡಿ ಗೌರವಿಸಲಾಗುತ್ತದೆ. ಒಲಿಂಪಿಕ್ ಸಮಿತಿಯು ಇದನ್ನು ತಮ್ಮ ಜಾಗತಿಕ ಸ್ಪರ್ಧೆಗಳಲ್ಲಿ ಒಂದಾಗಿ ಸ್ವೀಕರಿಸಿ ಅಳವಡಿಸಿಕೊಳ್ಳಲು ನಿರಾಕರಿಸಿದ್ದರೂ ಪ್ರತೀ ವರ್ಷ ಇಂಗ್ಲೆಂಡ್‌ನ ಬೆಂಟ್ ಲೀ ಬ್ರೂಕ್‌ಇನ್‌ನಲ್ಲಿ ಜಾಗತಿಕ ಹೆಬ್ಬರೆಳು ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದಲ್ಲದೆ ದೇಶವಿದೇಶಗಳ ಅನೇಕ ಸ್ಪರ್ಧಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದು ದಿನದಿಂದ ದಿನಕ್ಕೆ ಇದರ ಜನಪ್ರಿಯತೆಯೂ ಹೆಚ್ಚುತ್ತಿದೆ. ಇಂದಲ್ಲ ನಾಳೆ ಕಾಲ್ಬೆರಳ ಪಂದ್ಯಾವಳಿ ಜಾಗತಿಕ ಮಟ್ಟದ ಸ್ಪರ್ಧೆಯಾಗಿ ಹೊರಹೊಮ್ಮುವುದೆಂಬ ಆಶಾಭಾವದಲ್ಲಿ ಆಯೋಜಕರಿದ್ದಾರೆ. * ಪ. ನಾ. ಹಳ್ಳಿ ಹರೀಶ್ ಕುಮಾರ್