Advertisement

ಕೇದಾರನಾಥನಲ್ಲಿ ಚುನಾವಣೆ ಗೆಲ್ಲಿಸೆಂದು ಪ್ರಾರ್ಥಿಸಿಲ್ಲ: ಮೋದಿ

09:42 AM May 20, 2019 | Team Udayavani |

ಕೇದಾರನಾಥ: ಹಿಮಾಲಯದ ಪವಿತ್ರ ಧಾಮಗಳಿಗೆ ದ್ವಿದಿನ ಯಾತ್ರೆ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚುನಾವಣೆ ಗೆಲುವಿಗಾಗಿ ದೇವರಲ್ಲಿ ಪ್ರಾರ್ಥಿಸಿಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಉದ್ದೇಶ ಪ್ರಕೃತಿ,ಪರಿವರ್ತನೆ ಮತ್ತು ಪ್ರವಾಸ. ಅದೃಷ್ಟವಷಾತ್‌ ಕಠಿಣ ಶ್ರಮವಹಿಸುವ ತಂಡ ನಮ್ಮೊಂದಿಗೆ ಇದೆ. ನಾನು ಮಾಧ್ಯಮಗಳಿಗೂ ಈ ಕ್ಷೇತ್ರಗಳ ಬಗ್ಗೆ ಬಿತ್ತರಿಸಿ ಪ್ರವಾಸೋದ್ಯಮಕ್ಕೆ ನೆರವಾಗಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.

ನಾನು ದೇವರಲ್ಲಿ ಚುನಾವಣೆ ಗೆಲುವಿಗಾಗಿ ಪ್ರಾರ್ಥಿಸಿಲ್ಲ. ದೇವರು ನಮ್ಮನ್ನು ಕೇಳುವ ಬದಲು ಕೊಡುವಷ್ಟು ಸ್ವಾವಲಂಬಿಯನ್ನಾಗಿ ಮಾಡಿದ್ದಾನೆ ಎಂದರು.

ದೇಶದ ನಾಗರಿಕರು ವಿದೇಶ ಪ್ರವಾಸಗೈಯುವ ಬಗ್ಗೆ ನನ್ನ ಆಕ್ಷೇಪವಿಲ್ಲ, ಆದರೆ ಅವರು ನಮ್ಮ ದೇಶವನ್ನೂ ನೋಡಬೇಕು ಎಂದರು.

ನಾನು 2013 ರ ಭೀಕರ ಜಲಪ್ರಳಯದ ಬಳಿಕ ಕೇದಾರನಾಥ ಕ್ಷೇತ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಿದ್ದೆ ಎಂದರು.

Advertisement

18 ಗಂಟೆಗಳ ಕಾಲ ಕೇದಾರ ನಾಥ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಕಳೆದ ಮೋದಿ ಭಾನುವಾರ ಬದ್ರಿನಾಥನ ಸನ್ನಿಧಿಗೆ ಭೇಟಿ ನೀಡುತ್ತಿದ್ದಾರೆ.

ಶನಿವಾರ ಕೇದಾರನಾಥ ದೇಗುಲ ಸಮೀಪ ಗುಹೆಯೊಂದರಲ್ಲಿ
ಸುದೀರ್ಘ‌ ಕಾಲ ಧ್ಯಾನಾಸಕ್ತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next