Advertisement

ಉತ್ತಮ ಮನಸ್ಸು, ಸದೃಢ ದೇಹಕ್ಕೆ ಯೋಗ ಮಾಡಿ

11:04 AM Jun 21, 2018 | |

ನೆಲಮಂಗಲ: ಪತಂಜಲಿ ಮಹರ್ಷಿ ಪರಿಚಯಿಸಿದ ಯೋಗ ಮನುಷ್ಯನ ಮನಸ್ಸನ್ನು ಸದೃಢವಾಗಿಸಿ, ಆರೋಗ್ಯವಂತರನ್ನಾಗಿ ಪರಿವರ್ತಿಸಿದ್ದಕ್ಕೆ ವಿಶ್ವ ಮಾನ್ಯತೆ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಲ್ಮಾಸ್‌ ಪರ್ವೀನ್‌ತಾಜ್‌ ಅಭಿಪ್ರಾಯರು.

Advertisement

ವಿಶ್ವಯೋಗ ದಿನದ ಪ್ರಯುಕ್ತ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ನಡೆದ “ನಿತ್ಯ ಮಾಡಿರಿ ಯೋಗ ದೂರ ತಳ್ಳಿರಿ ರೋಗ’ ಎಂಬ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಕೊಂಡ ವರ ಮನಸ್ಸು ಒಂದೇ ಕಡೆ ಕೇಂದ್ರೀಕೃತವಾಗಿರುತ್ತದೆ.

ಉತ್ತಮ ಮನಸ್ಸು, ಸದೃಢ ದೇಹ ನಮ್ಮದಾಗುತ್ತದೆ. ಹೀಗಾಗಿ ಪ್ರತಿಯೊ ಬ್ಬರೂ ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡುವಂತೆ ಮಾರ್ಗದರ್ಶನ ನೀಡಬೇಕು. ಹೀಗಾದರೆ ಮಕ್ಕಳು ಅನಾರೋಗ್ಯ ದಿಂದ ಬಳಲುವ ಮತ್ತು ವಿದ್ಯಾಭ್ಯಾಸ ಮುಂದುವರಿ ಸಲು ಹಿಂದೇಟು ಹಾಕುವ ವಿದ್ಯಾರ್ಥಿಗಳಿಗೆ ಯೋಗವೇ ದಿವೌಷಧವಾಗುತ್ತದೆ
ಎಂದು ತಿಳಿಸಿದರು.

ಪತಂಜಲಿ ಯೋಗ ಕೇಂದ್ರದ ವಾದಿರಾಜು ಮಾತನಾಡಿ, ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ತಾಲೂಕಿನ ಜನರಿಗೆ ಅರಿವು ಮೂಡುವ ಉದ್ದೇಶದಿಂದ ಆಟೋ ಪ್ರಚಾರ, ಜಾಥಾ, ಕರಪತ್ರ ವಿತರಣೆ ಹಾಗೂ ಯೋಗ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಜ್ಞಾನವಾಹಿನಿ ಶಾಲೆ, ಹರ್ಷ ಪದವಿ ಪೂರ್ವ ಕಾಲೇಜು, ನರ್ಸಿಂಗ್‌ ಕಾಲೇಜು, ಸರ್ಕಾರಿ ಪ್ರೌಢಶಾಲೆ, ವಿದ್ಯಾನಿಕೇತನ ಮುಂತಾದ ಶಾಲಾ ಮಕ್ಕಳು ಜಾಥಾ ನಡೆಸಿ ಅರಿವು ಮೂಡಿಸುತ್ತಿದ್ದಾರೆಂದರು.

 ಜಾಥಾ: ಪಟ್ಟಣದ ತಾಲೂಕು ಕಚೇರಿಯಿಂದ ಅಡೇಪೇಟೆ, ಕೋಟೆ ಬೀದಿ, ಬಸ್‌ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರೌಢಶಾಲಾ, ನರ್ಸಿಂಗ್‌ ವಿದ್ಯಾರ್ಥಿಗಳು ಜಾಥಾ ನಡೆಸಿ ಅರಿವು ಮೂಡಿಸಿದರು.

Advertisement

 ಇಂದು ವಿಶ್ವಯೋಗ ದಿನ: ಗುರುವಾರ ಬೆಳಗ್ಗೆ 6ಕ್ಕೆ ವಿಶ್ವ ಯೋಗದಿನ ಪ್ರಯುಕ್ತ ಪಟ್ಟಣದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ತಾಲೂಕಿನಾದ್ಯಂತ ಯೋಗ ಕೇಂದ್ರಗಳು, ಶಾಲೆಗಳು, ತಾಲೂಕಿನ ಮುಖಂಡರು, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್‌ ಯೋಗ ಪ್ರದರ್ಶನ ಆಯೋಜಿಸಲಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್‌, ಮಕ್ಕಳ ತಜ್ಞ ಡಾ.ವಿನಯ್‌ ಕುಮಾರ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್‌, ಹರ್ಷ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವಿ.ನೆಗಳೂರು, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್‌, ಜ್ಞಾನ ವಾಹಿನಿ ಶಾಲೆ ಕಾರ್ಯದರ್ಶಿ ಪ್ರಭಾಕರ್‌, ಅಧ್ಯಾಪಕ
ಕೃಷ್ಣಪ್ಪ, ಮಂಜುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next