Advertisement
ವಿಧಾನಸೌಧದ ಆವರಣದಲ್ಲಿ ಶುಕ್ರವಾರ “ಸಂಚಾರಿ ಇಂದಿರಾ ಕ್ಯಾಂಟೀನ್’ ವಾಹನಗಳಿಗೆ ಚಾಲನೆ ನೀಡಿದ ಅವರು, ಪಾಲಿಕೆಯಿಂದ 170 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಈವರೆಗೆ 2.50 ಕೋಟಿ ಜನರಿಗೆ ಆಹಾರ ವಿತರಿಸಲಾಗಿದೆ. ಪ್ರಸ್ತುತ 18 ಮೊಬೈಲ್ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದು, ಇಂದಿನಿಂದ ನಿತ್ಯ 2.50 ಲಕ್ಷ ಬಡವರು ಇಂದಿರಾ ಕ್ಯಾಂಟೀನ್ ಆಹಾರ ಸೇವಿಸಲಿದ್ದಾರೆ ಎಂದರು.
Related Articles
Advertisement
ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್!: ರಾಜ್ಯದಲ್ಲಿ ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಪ್ರತಿಯೊಬ್ಬರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಜತೆಗೆ, ಮಕ್ಕಳಿಗೆ ಹಾಲು, ಇಂದಿರಾ ಕ್ಯಾಂಟೀನ್, ಮಾತೃಪೂರ್ಣ ಕಾರ್ಯಕ್ರಮ ಜಾರಿಗೊಳಿಸಿಲಾಗಿದೆ. ಇದರ ಉದ್ದೇಶ, ಎಲ್ಲರಿಗೂ ಎರಡು ಹೊತ್ತು ಊಟ ದೊರೆಯಬೇಕು ಮತ್ತು ಯಾರೂ ಅಪೌಷ್ಠಿಕತೆಗೆ ಒಳಗಾಗಬಾರದು ಎಂಬುದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟೀನ್‌ನಂತಹ ಯೋಜನೆಯಲ್ಲಿ ರಾಜಕೀಯ ಮಾಡುವವರು ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್ ಎಂದು ಗುಡುಗಿದರು.
ಅವರದು ಕಾಂಗ್ರೆಸ್ ಮುಕ್ತ, ನಮ್ಮದು ಹಸಿವು ಮುಕ್ತ: “ಅವರು (ಬಿಜೆಪಿ) ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ, ನಮ್ಮ ಘೋಷಣೆ “ಹಸಿವು ಮುಕ್ತ ಕರ್ನಾಟಕ’ವಾಗಿದೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಹಸಿವನ್ನು ಅನುಭವಿಸಿದವರಿಗೆ ಮಾತ್ರ ಹಸಿದವರ ಬಳಲಿಕೆ ಗೊತ್ತಾಗುತ್ತದೆ. ಹೊಟ್ಟೆ ತುಂಬಿದವರಿಗೆ ಹಸಿದವರ ಕಷ್ಟ ಗೊತ್ತಾಗುವುದಿಲ್ಲ. ಒಂದು ಪಕ್ಷವನ್ನು ಲ್ಲದಂತೆ ಮಾಡುವುದು ಮುಖ್ಯವಲ್ಲ. ಬದಲಿಗೆ ಸಮಾಜದಲ್ಲಿ ಹಸಿದವರಿಗೆ ಊಟ ಕೊಡುವುದು ಮುಖ್ಯ. ಆ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಮಾಧ್ಯಮದವರಿಗೂ ಕ್ಯಾಂಟೀನ್: ಇಂದಿರಾ ಕ್ಯಾಂಟೀನ್ ಕುರಿತು ಅಂತಾರಾಷ್ಟ್ರೀಯ ಮಟ್ಟದ ಬಿಬಿಸಿ ಸುದ್ದಿ ವಾಹಿನಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಮಾಧ್ಯಮದವರಿಗಾಗಿ ವಿಧಾನಸೌಧದ ಯಾವುದಾದರೂ ಒಂದು ಭಾಗದಲ್ಲಿ ಕ್ಯಾಂಟೀನ್ ನಿರ್ಮಿಸಲಾಗುವುದು ಎಂದು ಸಿಎಂ ತಿಳಿಸಿದರು. ಕಾರ್ಯಕ್ರಮದ ನಂತರ ಸಂಚಾರಿ ಇಂದಿರಾ ಕ್ಯಾಂಟೀನ್ ಬಳಿ ತೆರಳಿದ ಮುಖ್ಯಮಂತ್ರಿಗಳು, ಟೋಕನ್ ಪಡೆದು, ಒಂದು ಪ್ಲೇಟ್ ಸೇವಿಸಿದರು. ಜತೆಗೆ ಮೈಸೂರು ಪಾಕ್ ತಿಂದು ಬಾಯಿ ಸಿಹಿ ಮಾಡಿಕೊಂಡರು.