Advertisement

ಹಾವಂಜೆ, ಬೆಳ್ಳಂಪಳ್ಳಿ: 4 ಶಾಸನ ಪತ್ತೆ

03:30 PM Apr 18, 2017 | |

ಉಡುಪಿ: ಇತ್ತೀಚೆಗೆ ಹಾವಂಜೆ ಕೀಳಿಂಜೆಯ ಮದ್ಮಲ್‌ ಕೆರೆಯ ಬಳಿ ಒಂದು ಶಿಲಾಶಾಸನ ಎರಡು ಗಡಿಕಲ್ಲು, ಕೆರೆ ಆಸುಪಾಸಿನಲ್ಲಿ ಎರಡು ಗುಹಾಸಮಾಧಿ (ಬಾವಿ) ಪತ್ತೆಯಾಗಿತ್ತು. ಈಗ ಹಾವಂಜೆ ಮುಗ್ಗೇರಿಯ ಶಾಂತಾ ಶೆಡ್ತಿ ಹೊಸಮನೆಯಲ್ಲಿ ಶಿವಲಿಂಗ, ಬಸವ, ಕಾಲುದೀಪ, ಸೂರ್ಯ ಚಂದ್ರ, ಖಡ್ಗ ಮತ್ತು ಲಿಪಿ ಇರುವ ಶಿಲಾಶಾಸನ ಕಂಡಿದೆ. ಅದೇ ರೀತಿ ಬೆಳ್ಳಂಪಳ್ಳಿ ಗ್ರಾಮದ ಕಕ್ಕೆಹಳ್ಳಿಯ ರಾಜು ಮಡಿವಾಳರ ಗದ್ದೆಯಲ್ಲಿ ಇದೇ ರೀತಿ ಹಾಗೂ ಬರಹವುಳ್ಳ ಶಿಲಾ ಶಾಸನ ಇದೆ. ಮುಂದಕ್ಕೆ ಚಲಿಸಿದರೆ ಬೆಳ್ಳಂಪಳ್ಳಿ ಹಳೇ ಮನೆ ಕಂಬಳಗದ್ದೆಯಲ್ಲಿ ರಮೇಶ್‌ ಶೆಟ್ಟಿಯವರ ಕುಟುಂಬಸ್ಥರ ಗದ್ದೆಯಲ್ಲಿ ಇನ್ನೆರಡು ಶಾಸನ ಕಂಡುಬಂದಿದೆ. ಇದರಲ್ಲಿ ಒಂದೇ ತರಹದ ಚಿತ್ರಗಳಿದ್ದು ಹಳೆಗನ್ನಡದಲ್ಲಿ ಬರೆದಂತೆ ಗೋಚರಿಸುತ್ತದೆ. 

Advertisement

ಇದರ ಓದಿನಿಂದ ಅಂದಿನ ಕಾಲದ ಜೀವನ ಶೈಲಿ ಮೊದಲಾದವುಗಳನ್ನು ತಿಳಿದುಕೊಳ್ಳಬಹುದು. ಇಂತಹ ಅಮೂಲ್ಯವಾದ ಬರಹಗಳುಳ್ಳ ಶಿಲಾಶಾಸನವನ್ನು ಪ್ರಾಚ್ಯವಸ್ತು ಇಲಾಖೆ ಸೂಕ್ತ ರಕ್ಷಣೆಯೊಂದಿಗೆ ರಕ್ಷಣೆ ಮಾಡಬೇಕಾಗಿದೆ ಎಂದು ಭೂ ಮಾಲಕ ರಮೇಶ್‌ ಶೆಟ್ಟಿ ಮತ್ತು ಜಯಶೆಟ್ಟಿ  ಬನ್ನಂಜೆ, ಸಾಧು ಪೂಜಾರಿ ಕೀಳಿಂಜೆ, ಗಣೇಶ್‌ ರಾಜ್‌ ಸರಳೇಬೆಟ್ಟು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next