ಬ್ರಹ್ಮಾವರ: ಹಾವಂಜೆ ಬಾಣಬೆಟ್ಟು ನಡುಮನೆ ಕುಟುಂಬಸ್ಥರು ಮತ್ತು ಕಾಪು ಕೊಪ್ಪಲಮನೆ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ವೀರಭದ್ರ ಅಬ್ಬಗದಾರಗ ಸಪರಿವಾರ ನಾಗಬ್ರಹ್ಮಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಪುನಃಪ್ರತಿಷ್ಠೆ, ಬ್ರಹ್ಮಕಲಶ ಫೆ. 4ರಂದು ಪ್ರಾರಂಭಗೊಂಡಿದ್ದು 7ರ ವರೆಗೆ ಜರಗಲಿದೆ.
ಫೆ. 7ರಂದು ಬೆಳಗ್ಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ನಾಗ ಸಂದರ್ಶನ, ಪಲ್ಲ ಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಯಕ್ಷಗಾನ, ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ: ಫೆ. 7ರ ಸಂಜೆ ಜರಗುವ ಧಾರ್ಮಿಕ ಸಭೆಯಲ್ಲಿ ಶ್ರೀ ಮಠ ಬಾಳುRದ್ರುವಿನ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಹೆಗ್ಡೆ ಬಾಣಬೆಟ್ಟು ಅಧ್ಯಕ್ಷತೆ ವಹಿಸುವರು. ವೇ|ಮೂ| ವಿದ್ವಾನ್ ಹೆರ್ಗ ಜಯರಾಮ ತಂತ್ರಿ, ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಶುಭಾಶಂಸನೆಗೈಯುವರು.
ಅತಿಥಿಗಳಾಗಿ ಡಾ| ಎಂ.ಪಿ. ರಾಘವೇಂದ್ರ ರಾವ್, ಸುಬ್ಬಯ್ಯ ಶೆಟ್ಟಿ ಮುಂಬಯಿ, ರಾಘವೇಂದ್ರ ಭಟ್ ಮಂಗಳೂರು, ಪಟ್ಟಾಭಿರಾಮ ಮಧ್ಯಸ್ಥ ಬೆಂಗಳೂರು, ರಘುರಾಮ ಶೆಟ್ಟಿ ಮುಂಬಯಿ, ಕೃಷ್ಣ ವೈ. ಶೆಟ್ಟಿ ಮುಂಬಯಿ, ಶಿವರಾಮ ಬಿ. ಶೆಟ್ಟಿ ಸೂರತ್, ಗಣೇಶ್ ಎಸ್. ಹೆಗ್ಡೆ ಪುಣೆ, ರಾಧಾಕೃಷ್ಣ ಶೆಟ್ಟಿ ನರ್ನಾಡು, ಉದಯ ಶೆಟ್ಟಿ ಯಳಗೊಳಿ, ಅಜಿತ್ ಕುಮಾರ್ ಶೆಟ್ಟಿ ಅಂಕಲೇಶ್ವರ, ವಸಂತಿ ಶೆಟ್ಟಿ ಹಾವಂಜೆ, ಸುರೇಶ್ ಬಿ. ಶೆಟ್ಟಿ ಹಾವಂಜೆ ಉಪಸ್ಥಿತರಿರುವರು ಎಂದು ಆಡಳಿತ ಮೊಕ್ತೇಸರ ಸಂಜೀವ ಹೆಗ್ಡೆ ಬಾಣಬೆಟ್ಟು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಾಪು ಕೊಪ್ಪಲ ಮನೆ ಕೃಷ್ಣ ಎಸ್. ಶೆಟ್ಟಿ, ಅಧ್ಯಕ್ಷ ಬಾಣಬೆಟ್ಟು ನಡುಮನೆ ಸದಾಶಿವ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.