Advertisement

ವಿಜಯಪುರ: ತಾಯಿ ನಿಂದನೆ ಪ್ರಶ್ನಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ

12:39 PM Dec 26, 2020 | keerthan |

ವಿಜಯಪುರ: ತನ್ನ ತಾಯಿಯ ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನೊಬ್ಬನನ್ನು ಮಾಂಸ ಕತ್ತರಿಸುವ ಮಚ್ಚಿನಲ್ಲಿ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖತಿಜಾಪುರ ಗ್ರಾಮದಲ್ಲಿ ಜರಗಿದೆ.

Advertisement

ಹತ್ಯೆಯಾದವನನ್ನು ಇಸ್ಮಾಯಿಲ್ ಮುಲ್ಲಾ (22) ಹಾಗೂ ಹತ್ಯೆ ಆರೋಪಿಯನ್ನು ಅದೇ ಗ್ರಾಮದ ಖಾಜಲ್ ಬೇಪಾರಿ ಎಂದು ಗುರುತಿಸಲಾಗಿದೆ.

ಹತ್ಯೆಯಾಗಿರುವ ಇಸ್ಮಾಯಿಲ್ ತಾಯಿಗೆ ಖಾಜಲ್ ಅವಾಚ್ಯ‌ ಶಬ್ದಗಳಿಂದ ನಿಂದಿಸಿದ್ದ. ಇದನ್ನು ಪ್ರಶ್ನಿಸಿದ ಇಸ್ಮಾಯಿಲ್ ಗೆ ಖಾಜಲ್ ಮಚ್ಚು ಚುಚ್ಚಿ ಹತ್ಯೆ‌ ಮಾಡಿದ್ದಾನೆ.

ಇದನ್ನೂ ಓದಿ:ಬೈಕ್ ಗೆ ಗುದ್ದಿ ಕೆಳಕ್ಕೆ ಬಿದ್ದ ಸವಾರರಿಗೆ ಚೂರಿ ಇರಿತ! ಉಳ್ಳಾಲದಲ್ಲಿ ಆಗಂತುಕರಿಂದ ಕೃತ್ಯ

ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸೈ ಆನಂದ ಠಕ್ಕಣವರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಹತ್ಯೆ ಆರೋಪಿ ಖಾಜಲ್ ಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next