Advertisement

ಕೃಷಿಗೆ ಶರಣಗಾತಿ ಬದುಕು ಹತ್ತಿದ್ದು ಹತ್ತಿಯಿಂದ

03:50 AM Feb 20, 2017 | Harsha Rao |

ಬೇಸಾಯವನ್ನೇ ತನ್ನ ಜೀವನದ ಆಧಾರವಾಗಿ ಮಾಡಿಕೊಂಡು, ಕೃಷಿಯಲ್ಲಿ ವೈಜಾnನಿಕ ತಂತ್ರಜಾnನವನ್ನು ಅಳವಡಿಸಿಕೊಂಡು  ಹೊಸ ರೀತಿಯಲ್ಲಿ  ಬೆಳೆಯನ್ನು ಬೆಳೆಯುವ ಮೂಲಕ ಲಾಭವನ್ನು ಪಡೆಯುತ್ತಿದ್ದಾರೆ ಅಫ‌ಜಲಪುರ ತಾಲ್ಲೂಕಿನ ಚಿಣಮಗೇರಾ ಗ್ರಾಮದ ರೈತ ಶಿವಶರಣಪ್ಪ ತಳವಾರ.

Advertisement

ತಮ್ಮ 8 ಎಕರೆಯಲ್ಲಿ 4 ಎಕರೆ ಬಿ.ಟಿ ಹತ್ತಿ ಬೆಳೆಯನ್ನು, ಇನ್ನುಳಿದ 4 ಎಕರೆಯಲ್ಲಿ ಸೌತೆಕಾಯಿಯನ್ನು ಬೆಳೆದು ಲಾಭವನ್ನು ಪಡೆಯುತ್ತಿದ್ದಾರೆ. ವಿದ್ಯಾವಂತರಾದ ಇವರು ಸುಮಾರು ವರ್ಷಗಳಿಂದ ಬೇಸಾಯದಲ್ಲಿ ತೊಡಗಿಕೊಂಡಿದ್ದಾರೆ. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯವನ್ನು ಮಾಡುತ್ತಿದ್ದಾರೆ.

4 ಎಕರೆ ಭೂಮಿಯನ್ನು ಟ್ರ್ಯಾಕ್ಟರ್‌ಅನ್ನು ಬಳಸಿ ನೇಗಿಲನ್ನು ಹೊಡೆಸಬೇಕು. ನಂತರ ಬದುಗಳನ್ನು ಬಿಡಬೇಕು. ಎಕರೆಗೆ 2 ಪಾಕೆಟ್‌ನಂತೆ ಸುಮಾರು 8 ಪಾಕೆಟ್‌ ಬೀಜಗಳನ್ನು ಕೈಯಿಂದ 3 ಅಡಿ ಅಂತರದಲ್ಲಿ ಊರಬೇಕು. ಹನಿ ನೀರಾವರಿ ಪದ್ಧತಿಯಲ್ಲಿ ಗ್ರಿಪ್‌ ಅನ್ನು ಅಳವಡಿಸಿ ನೀರನ್ನು ಹಾಯಿಸಬೇಕು. 

ಸಮಯಕ್ಕೆ ತಕ್ಕಂತೆ ಗೊಬ್ಬರವನ್ನು ಹಾಕಬೇಕು. ಸಾವಯವ ಗೊಬ್ಬರವನ್ನು ಆಗಾಗ ಚೆಲ್ಲುತ್ತಿರಬೇಕು. ಸುಮಾರು 2 ತಿಂಗಳಲ್ಲಿ ಸಸಿ ಬೆಳೆದು ಗಿಡಗಳಾಗುತ್ತವೆ. ಹೂ ಬಿಡಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ಘನ ತ್ಯಾಜ್ಯವನ್ನು ಹಾಕಬೇಕು. ಗಿಡಗಳನ್ನು ಸರಿಯಾದ ರೀತಿಯಲ್ಲಿ ಬೇಲಿ ಹಾಕುವ ಮೂಲಕ ಕಾಯಬೇಕು. ಕಾಯಿಬಿಟ್ಟು ಒಡೆಯುವ ಹಂತಕ್ಕೆ ಬರುತ್ತವೆ. ಹತ್ತಿ ಪೂರ್ಣವಾಗಿ ಒಡೆದ ನಂತರ ಕೂಲಿಯವರ ಸಹಾಯದಿಂದ ಹತ್ತಿ ಬಿಡಿಸಿ ಮಾರಬೇಕು. ಇಷ್ಟೆಲ್ಲಾ ಮಾಡಿರುವ ಶಿವಶರಣಪ್ಪ ತಳವಾರ ಕೃಷಿ ಕಾರ್ಮಿಕರ ವೆಚ್ಚವನ್ನು ಸೌತೆಕಾಯಿ ಮಾರುವ ಮೂಲಕ  ಭರಿಸುತ್ತಿದ್ದಾರೆ. 

ಹತ್ತಿ ಕಾಯಿ ತೊಳೆಯಾಗಿ ಒಡೆಯಲು 2 ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಚೆನ್ನಾಗಿ ಒಡೆದ ನಂತರ ಕೂಲಿಯವರನ್ನು ಬಳಸಿ ಹತ್ತಿಯನ್ನು ಬಿಡಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಹತ್ತಿಗೆ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತದೆ. ಒಳ್ಳೆಯ ಲಾಭವನ್ನು  ತರುತ್ತದೆ. ಮಿಶ್ರ ಬೆಳೆಯಿಂದ ಇದರ ಖರ್ಚು ವೆಚ್ಚವನ್ನು  ಮಾಡಲಾಗುತ್ತದೆ.

Advertisement

ಬಂಡವಾಳ
 ಹತ್ತಿ ಬೆಳೆಯನ್ನು ಬೆಳೆಯಲು ಸುಮಾರು 1 ಲಕ್ಷದವರೆಗೆ ಖರ್ಚು. ಇನ್ನು ಬೆಳೆ ಮಾರುಕಟ್ಟೆಗೆ ಹೋಗುವವರೆಗೂ ಇಂತ ಖರ್ಚುಗಳು ಸುಮಾರು ಇವೆ. ಹತ್ತಿ ಬೆಳೆಯು 6 ತಿಂಗಳ ಬೆಳೆಯಾಗಿದ್ದು 4 ರಿಂದ 5 ಬಾರಿ ಮಾರುಕಟ್ಟೆಗೆ ಹೋಗುತ್ತದೆ. ಈಗಾಗಲೇ 3 ಬಾರಿ ಮಾರುಕಟ್ಟೆಗೆ ಹೋಗಿದ್ದು ಪ್ರತಿ ಬಾರಿಯೂ 1ಲಕ್ಷದವರೆಗೆ ಲಾಭವನ್ನು ತಂದುಕೊಟ್ಟಿದೆ ತಳವಾರರಿಗೆ. 

ಹತ್ತಿ ತೊಳೆಯನ್ನು ಬಿಡಿಸಿ ಮಾರಿದ ನಂತರದಲ್ಲಿ ಗಿಡಗಳ ಎಲೆ ಮತ್ತು ಚಿಗುರನ್ನು ಕತ್ತರಿಸಿ ನೀರನ್ನು ಹಾಯಿಸಬೇಕು.  ಗೊಬ್ಬರವನ್ನು ಹಾಕಬೇಕು. ಗಿಡಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸಬೇಕು. ಪ್ರತಿ ಬಾರಿ ಇದೇ ರೀತಿಯಲ್ಲಿ ಮಾಡಿ ಬೆಳೆಯ ಲಾಭವನ್ನು ಪಡೆದುಕೊಳ್ಳಬಹುದು ಎನ್ನುತ್ತಾರೆ  ಶಿವಶರಣಪ್ಪ ತಳವಾರ. 

ಮಾಹಿತಿಗೆ– 9972897628. 

Advertisement

Udayavani is now on Telegram. Click here to join our channel and stay updated with the latest news.

Next