Advertisement

ಕುಂದಾನಗರಿಯಲ್ಲಿ ಕುಂದಾ ಸವಿದ ಶಿವಣ್ಣ ದಂಪತಿ ; ಅದ್ಧೂರಿ ಸ್ವಾಗತ

02:04 PM Jan 06, 2023 | Team Udayavani |

ಬೆಳಗಾವಿ: ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಅವರು ಕುಂದಾನಗರಿ ಬೆಳಗಾವಿಗೆ ಶುಕ್ರವಾರ ಆಗಮಿಸಿದ್ದು, ಬೆಳಗಾವಿಗೆ ಕಾಲಿಡುತ್ತಿದ್ದಂತೆ ಸಂಬಂಧಿಕರ ಮನೆಯಲ್ಲಿ ಕುಂದಾ ಸವಿದರು.

Advertisement

ಶಿವಬಸವನ ನಗರದಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ ಶಿವಣ್ಣ ಹಾಗೂ ಪತ್ನಿ ಗೀತಾ ಅವರು ಮೊದಲಿಗೆ ಕುಂದಾ ಸವಿದರು. ಲಘು ಉಪಹಾರ ಮಾಡಿದರು.

ವೇದ ಚಿತ್ರ ಪ್ರಚಾರಾರ್ಥವಾಗಿ ಬೆಳಗಾವಿಗೆ ಭೇಟಿ ನೀಡಿರುವ ಶಿವಣ್ಣ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಶಿವಣ್ಣ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.

ನಂತರ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಮೆಗೆ ಹಾರ ಹಾಕಿದರು. ಅಭಿಮಾನಿಗಳೊಂದಿಗೆ ರೋಡ್ ಶೋ ಮೂಲಕ ಚಿತ್ರಾ ಚಲನಚಿತ್ರ ಮಂದಿರಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next