Advertisement

ಹಾಸನ ಟಿಕೆಟ್‌: ಶೀಘ್ರದಲ್ಲೇ ಅಂತಿಮ ತೀರ್ಮಾನ

09:51 PM Feb 27, 2023 | Team Udayavani |

ಚನ್ನಪಟ್ಟಣ: ಸದ್ಯದಲ್ಲೇ ಬಿಡುಗಡೆಯಾಗಲಿರುವ ಎರಡನೇ ಪಟ್ಟಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಹ ಫೈನಲ್‌ ಆಗಲಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೊಂಬೆನಾಡಿನ ಬಮೂಲ್‌ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಎಲ್ಲರಿಗೂ ಟಿಕೆಟ್‌ ಕೊಡೋದಕ್ಕೆ ಆಗಲ್ಲ. ಅಭ್ಯರ್ಥಿಯಾಗಬೇಕು ಅಂತ ಆಸೆ ಇದ್ದವರು ಈ ರೀತಿಯ ಒತ್ತಡ ಹಾಕೋದು ಸಹಜ ಎಂದರು. ಟಿಕೆಟ್‌ ಸಂಬಂಧ ದೇವೇಗೌಡರ ಮಧ್ಯಸ್ಥಿಕೆ ವಿಚಾರವಾಗಿ ಮಾತನಾಡಿದ ಅವರು, ಸದ್ಯ ಅವರ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಅವರಿಲ್ಲ. ಎಲ್ಲರೂ ಈ ಬಗ್ಗೆ ಕೂತು ಚರ್ಚೆ ಮಾಡಿ ಬಗೆಹರಿಸುತ್ತೇವೆ ಎಂದರು.

ಜೋಶಿ ವಿರುದ್ಧ ಆಕ್ರೋಶ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಿರುವ ಹೇಳಿಕೆಯನ್ನು ಉಲ್ಲೇಖೀಸಿ ಮಾತನಾಡಿದ ಕುಮಾರಸ್ವಾಮಿ, ಹೌದು, ನಮ್ಮ ಕುಟುಂಬದಲ್ಲಿ ಆರಕ್ಕೂ ಹೆಚ್ಚು ಮಂದಿ ರಾಜಕೀಯದಲ್ಲಿದ್ದೇವೆ. ಇರುವ ಒಬ್ಬ ಸಹೋದರನನ್ನು ನೆಟ್ಟಗೆ ಇಟ್ಟುಕೊಳ್ಳಲು ಬಾರದ ಜೋಶಿಯಿಂದ ನಾವು ಹೇಳಿಸಿಕೊಳ್ಳಬೇಕಿದೆ ಎಂದು ಏಕವಚನದಲ್ಲಿ ಹರಿ ಹಾಯ್ದರು.

ಮೀಡಿಯಾಗಳು ಪ್ರಧಾನಿ ಮಾಡಲಿಲ್ಲ: ಒಬ್ಬ ಸಾಮಾನ್ಯ ರೈತನ ಮಗ ಎಚ್‌.ಡಿ.ದೇವೇಗೌಡರನ್ನು ಮೀಡಿಯಾಗಳು ಪ್ರಧಾನಿ ಮಾಡಲಿಲ್ಲ, ದೇವರ ಮೇಲೆ ದೊಡ್ಡಗೌಡರಿಗೆ ಇರುವ ಅಚಲ ಭಕ್ತಿ, ಜನರ ಅಖಂಡ ಆಶೀರ್ವಾದ, ಜನಪರ ಹೋರಾಟ ಅವರನ್ನು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಲು ಪೂರಕ ವಾತಾವರಣ ನಿರ್ಮಿಸಿತೇ ಹೊರತು, ಮಾಧ್ಯಮಗಳಾಗಲಿ, ಯಾವುದೇ ರಾಜಕೀಯ ಪಕ್ಷಗಳಾಗಲಿ ಮಾಡಲಿಲ್ಲ ಎಂದರು.

ಇದೇ ನನ್ನ ಕೊನೆಯ ಚುನಾವಣೆ: ಹಂಗಿನ ಸರ್ಕಾರದಲ್ಲಿ ನನ್ನ ಕನಸಿನ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯವಾಗಲಿಲ್ಲ, ಈ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆ ನಾನು ಸ್ಪರ್ಧೆ ಮಾಡುವ ಕೊನೆಯ ಚುನಾವಣೆಯಾಗಿದ್ದು, ನನ್ನ ಹಾಗೂ ಪಕ್ಷವನ್ನು ನಿಚ್ಚಳ ಬಹುಮತದೊಂದಿಗೆ ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next