Advertisement

Hassan: ಕಾರಿನೊಳಗೆ ಗುಂಡಿನ ದಾಳಿ; ಇಬ್ಬರು ಬಲಿ

04:31 PM Jun 20, 2024 | Team Udayavani |

ಹಾಸನ: ಕಾರಿನೊಳಗೆ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ ಘಟನೆ ಹಾಸನದಲ್ಲಿ ಗುರುವಾರ ನಡೆದಿದೆ. ಹಾಸನದ ಹೊಯ್ಸಳ ನಗರದ ಹಳೆ ಮಾಸ್ಟರ್ಸ್ ಕಾಲೇಜು ಬಳಿ ಗುರುವಾರ ಮಧ್ಯಾಹ್ನ 12.50 ರ ಸಮಯದಲ್ಲಿ ಈ ಘಟನೆ ನಡೆದಿದೆ.

Advertisement

ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದ ಇಬ್ಬರು ಯುವಕರ ನಡುವೆ ಜಗಳ ಆರಂಭವಾಗಿದ್ದು ಆ ಸಂದರ್ಭದಲ್ಲಿ ಒಬ್ಬ ಹಾರಿಸಿದ ಗುಂಡಿಗೆ ಒಬ್ಬ ಕಾರಿನಿಂದ ಹೊರಗೆ ಬಿದ್ದು ಸಾವನ್ನಪ್ಪಿದ್ದಾನೆ. ಆನಂತರ ಮತ್ತೊಬ್ಬ ಕಾರಿನೊಳಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಒಂದು ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗನ್ ಶಾಟ್ ಗೆ ಬಲಿಯಾದ ಇಬ್ಬರ ಗುರುತು ಪತ್ತೆಯಾಗಿದ್ದು, ಘಟನೆಗೆ ರಿಯಲ್ ಎಸ್ಟೇಟ್ ಜಗಳ ಕಾರಣ ಎನ್ನಲಾಗುತ್ತಿದೆ.

ಬೆಂಗಳೂರು ಮೂಲದ ಆಸೀಫ್ (46) ಮತ್ತು ಹಾಸನದ ಆಡುವಳ್ಳಿಯ ಶರಾಫತ್ ಅಲಿ (52) ಮೃತರು. ಇವರಿಬ್ಬರೂ ಸ್ನೇಹಿತರಾಗಿದ್ದು ಶುಂಠಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

ಮೃತ ಶರಾಪತ್ ಮೂಲತಃ ದೆಹಲಿಯವನಾಗಿದ್ದು ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದ. ಇವರಿಬ್ಬರೂ ಮಧ್ಯಾಹ್ನ 12.ಗಂಟೆ ಸಮಯದಲ್ಲಿ ಕೆ.ಎ.09 MB 3868 ಟೆರಾನೋ ಕಾರಿನಲ್ಲಿ ಹೊಯ್ಸಳ ನಗರಕ್ಕೆ ಬಂದಿದ್ದರು.

Advertisement

ನಂತರ ನಡೆದ ಗುಂಡಿನ ದಾಳಿಯ ಬಗ್ಗೆ ಇನ್ನೂ ಸ್ಪಷ್ಟತೆ ದೊರೆಯಬೇಕಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next