ಹಾಸನ: ಜಿಲ್ಲೆಯಲ್ಲಿ ಪೂರ್ಣಗೊಂಡ ವಿವಿಧ ಇಲಾಖೆಗಳ ಸುಮಾರು 848 ಕೋಟಿ ರೂ. ಕಾಮಗಾರಿಗಳ ಬಿಲ್ ಪಾವತಿ ಮಾಡದೇ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಸಂಪನ್ಮೂಲ ಇಲಾಖೆ (ಹೇಮಾವತಿ ಯೋಜನೆ)ಯಲ್ಲಿ 500 ಕೋಟಿ ರೂ., ಲೋಕೋಪಯೋಗಿ ಇಲಾಖೆಯಲ್ಲಿ 248.43 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿ 100 ಕೋಟಿ ರೂ. ಬಿಲ್ ಪಾವತಿಗೆ ಸಿದವಿದೆ. ಆದರೆ ಸರ್ಕಾರ ಹಾಸನ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡು ತ್ತಿಲ್ಲ. ಶೇ. 8ರಷ್ಟು ಕಮೀಷನ್ ಪಡೆದು ಮೂರ್‍ನಾಲ್ಕು ಮಂದಿ ಗುತ್ತಿಗೆದಾರರಿಗೆ ಹೇಮಾವತಿ ಯೋಜನೆಯಲ್ಲಿ 25 ರಿಂದ 100 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ. ಅದೇ ರೀತಿ ಸಣ್ಣ-ಪುಟ್ಟ ಗುತ್ತಿಗೆದಾರರೂ ಶೇ.8 ರಷ್ಟು ಕಮೀಷನ್ ಕೊಡಲು ಸಿದರಾಗಿದ್ದಾರೆ ಬಿಲ್ ಪಾವತಿಸಲಿ ಎಂದರು.
ಪ್ರಧಾನಿ ಮೋದಿ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು 10 ಪಸೆಂಟ್ ಸರ್ಕಾರ ಎಂದು ಟೀಕಿಸುತ್ತಿದ್ದರು. ಈಗ ಅನುದಾನ ಬಿಡುಗಡೆಗೆ 8 ಪರ್ಸೆಂಟ್ ತೆಗೆದುಕೊಳ್ಳುವ ಸರ್ಕಾರವನ್ನು ಏನೆಂದುಕರೆಯುತ್ತಾರೆ ಎಂದು ರೇವಣ್ಣ ಪ್ರಶ್ನಿಸಿದರು. ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಯಾರು ಎಷ್ಟು ಬೇಕಾದರೂ ಭೂಮಿ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಸರ್ಕಾರ ಭೂ ಮಾಫಿಯಾ ಪರ ಎಂದು ಖಾತರಿಯಾಗಿದೆ ಎಂದರು.
ಬದುಕಿದ್ದಾಗಲೇ ಕಾಲೇಜು ಪ್ರಾರಂಭ: ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನಕ್ಕೆ ಮಂಜೂ ರಾಗಿದ್ದ ತೋಟಗಾರಿಕೆ ಕಾಲೇಜನ್ನು ಸರ್ಕಾರ ರದ್ದುಪಡಿಸಿದೆ. ನಾನು ಬದುಕಿದ್ದಾಗಲೇ ಕಾಲೇಜು ಪ್ರಾರಂಭ ಮಾಡ್ತೀನಿ ಎಂದು ರೇವಣ್ಣ ಅವರು ಪ್ರತಿಕ್ರಿಯಿಸಿದರು.
ಜಿಪಂ ಸಿಇಒಗೆ ರೇವಣ್ಣ ಎಚ್ಚರಿಕೆ: ಹಾಸನ ಜಿ ಪಂ ಸಾಮಾನ್ಯ ಸಭೆಯನ್ನು ಜಿಪಂ ಸಿಇಒ ಕಳೆದ 6 ತಿಂಗಳಿನಿಂದಲೂ ಕರೆದಿಲ್ಲ. ಉಪಾಧ್ಯಕ್ಷರು ಸೇರಿ 22 ಜನರು ಸಭೆ ಕರೆಯಬೇಕೆಂದು ಮನವಿ ಸಲ್ಲಿಸಿದರೂ ಸಭೆ ಕರೆದಿಲ್ಲ ಎಂದು ಸಿಇಒ ಪರಮೇಶ್ ವಿರುದಟಛಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿ ಸಿದರು. ಹಾಸನ ಜಿಪಂ ಸಿಇಒ ಸಭೆ ಕರೆಯದಿದ್ದರೆ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ಕಚೇರಿಯ ಬಳಿ ಜಿಪಂ ಜೆಡಿಎಸ್ ಸದಸ್ಯರೊಂದಿಗೆ ಧರಣಿ ಕೂರುವೆ ಎಂದು ಎಚ್ಚರಿಸಿದರು.