Advertisement

ಸಿಂಗ್‌, ಸೋನಿಯಾ ಭೇಟಿಯಾದ ಹಸೀನಾ

10:03 AM Oct 08, 2019 | sudhir |

ಹೊಸದಿಲ್ಲಿ: ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ರವಿವಾರ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ಎರಡೂ ದೇಶಗಳಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಅರ್ಧ ಗಂಟೆ ಕಾಲ ಈ ಮಾತುಕತೆ ನಡೆದಿದ್ದು, ಈ ವೇಳೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ, ಆನಂದ್‌ ಶರ್ಮಾ ಮತ್ತಿತರರಿದ್ದರು. ಪ್ರಿಯಾಂಕಾರನ್ನು ನೋಡುತ್ತಿದ್ದಂತೆ ಹಸೀನಾ ಅವರು ಅತ್ಯಂತ ಆತ್ಮೀಯವಾಗಿ ಆಲಿಂಗಿಸಿಕೊಂಡಿದ್ದು ಕಂಡುಬಂತು. ತದನಂತರ ಟ್ವೀಟ್‌ ಮಾಡಿದ ಪ್ರಿಯಾಂಕಾ, “ದೀರ್ಘ‌ಕಾಲದಿಂದ ಭೇಟಿ ಯಾಗಬೇಕೆಂದು ನಾನು ಕಾಯುತ್ತಿದ್ದ ಹಸೀನಾಜೀಯಿಂದ ನನಗಿಂದು ವಿಳಂಬವಾದ ಆಲಿಂಗನ ಸಿಕ್ಕಿತು. ಅವರು ಯಾವತ್ತೂ ನನಗೆ ಸ್ಫೂರ್ತಿಯ ಸೆಲೆಯಿದ್ದಂತೆ’ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next