Advertisement

ತಿಂಗಳಿಗೆ 10 ಲಕ್ಷ ರೂ. ಮಧ್ಯಾವಧಿ ಪರಿಹಾರ ಕೇಳಿದ ಶಮಿ ಪತ್ನಿ

03:26 PM Apr 11, 2018 | Team Udayavani |

ಹೊಸದಿಲ್ಲಿ : ಭಾರತೀಯ ಕ್ರಿಕೆಟಿಗ ಮೊಹಮ್ಮದ್‌ ಶಮಿ ವಿರುದ್ಧ ಕೌಟುಂಬಿಕ ಹಿಂಸೆಯ ಕೇಸು ದಾಖಲಿಸಿರುವ ಆತನ ಪತ್ನಿ  ಹಸೀನ್‌ ಜಹಾನ್‌ ಮಧ್ಯಾವಧಿ ಪರಿಹಾರವಾಗಿ ತನಗೆ ತಿಂಗಳಿಗೆ 7 ಲಕ್ಷ ರೂ. ಮತ್ತು ಮಗುವಿಗೆ ತಿಂಗಳಿಗೆ 3 ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ. ಮಾಸಿಕ ಪರಿಹಾರವನ್ನು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾಳೆ. 

Advertisement

ಪತಿ ಮೊಹಮ್ಮದ್‌ ಶಮಿ, ಆತನ ತಾಯಿ, ಹಿರಿಯ ಸಹೋದರ, ಸಹೋದರಿ ಮತ್ತು ನಾದಿನಿಯ ವಿರುದ್ಧ ಹಸೀನ್‌ ಜಹಾನ್‌ ಕೌಟುಂಬಿಕ ಹಿಂಸೆಯ ಕೇಸನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದು ಇದರ ತುರ್ತನ್ನು ಮನಗಂಡಿರುವ ಕೋರ್ಟ್‌ ಬೇಗನೆ ವಿಚಾರಣೆ ನಡೆಸಲು ನಿರ್ಧರಿಸಿರುವುದಾಗಿ ಆಕೆಯ ವಕೀಲರು ಮಾಧ್ಯಮಕ್ಕೆ ತಿಳಿಸಿದ್ದಾರೆ.  ದಾವೆಯನ್ನು ಜಯಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಕಳೆದ ಮಾರ್ಚ್‌ ತಿಂಗಳಲ್ಲಿ ಹಸೀನ್‌ ಜಹಾನ್‌ ಈ ಕೇಸಿಗೆ ಸಂಬಂಧಿಸಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಗಿದ್ದಳು. ಸುಮಾರು 15 ನಿಮಿಷ ಸಾಗಿದ ಮಾತುಕತೆಯಲ್ಲಿ ಮಮತಾ ಬ್ಯಾನರ್ಜಿ ತನ್ನನ್ನು ಬೆಂಬಲಿಸುವ ಭರವಸೆ ನೀಡಿರುವುದಾಗಿ ಹಸೀನ್‌ ಜಾಹನ್‌ ಹàಳಿಕೊಂಡಿದ್ದರು.

ಮೊಹಮ್ಮದ್‌ ಶಮೀ ಅವರು ಇಂಗ್ಲಂಡ್‌ ಉದ್ಯಮಿ ಮೊಹಮ್ಮದ್‌ ಭಾಯಿ ಅವರ ಆಣತಿಯ ಮೇರೆಗೆ ಪಾಕ್‌ ಮಹಿಳೆ ಅಲಿಷ್‌ಬಾ ಎಂಬಾಕೆಯನ್ನು ಭೇಟಿಯಾಗಿ ಆಕೆಯಿಂದ ಮ್ಯಾಚ್‌ ಫಿಕ್ಸಿಂಗ್‌ ಹಣ ಪಡೆದುಕೊಂಡಿದ್ದುದಾಗಿ ಹಸೀನ್‌ ಜಹಾನ್‌ ಆರೋಪಿಸಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next