Advertisement

ಹಾಸನಾಂಬೆ ದೇಗುಲ: 10 ದಿನಗಳಲ್ಲಿ 1.49 ಕೋ. ರೂ. ಸಂಗ್ರಹ

10:59 PM Oct 24, 2022 | Team Udayavani |

ಹಾಸನ: ಅವ್ಯವಸ್ಥೆ ನಡು ವೆಯೇ ಭಕ್ತರು ಕಳೆದ 12 ದಿನಗಳಿಂದ ಶ್ರೀ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ.

Advertisement

ಧರ್ಮದರ್ಶನದ ಸಾಲಿನಲ್ಲಿ ಹೋಗಲಾಗದವರು, ಪ್ರಭಾವಿಗಳ ಮೂಲಕ ಪಾಸ್‌ ಪಡೆಯಲಾಗದವರು ದೇವಿಯ ನೇರ ದರ್ಶನಕ್ಕೆ ಖರೀದಿಸಿದ 1000 ರೂ. ಹಾಗೂ 300 ರೂ. ಟಿಕೆಟ್‌ ಖರೀದಿಯಿಂದಲೇ ದೇವಾಲಯಕ್ಕೆ 10 ದಿನದಲ್ಲಿ ಕೋಟಿ ರೂ. ಮೀರಿದ ಆದಾಯ ಬಂದಿದೆ.

ಅ.14ರಿಂದ 23ರ ವರೆಗೆ ನೇರ ದರ್ಶನದ ಟಿಕೆಟ್‌ ಮಾರಾಟ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ 1,49, 29,200 ರೂ. ಆದಾಯ ಲಭ್ಯವಾಗಿದೆ. ಇನ್ನೂ ಎರಡು ದಿನಗಳಲ್ಲಿ 40ರಿಂದ 50 ಲಕ್ಷ ರೂ. ಸಂಗ್ರಹದ ನಿರೀಕ್ಷೆಯಿದೆ.
ಇದು ನೇರ ದರ್ಶನದ ಟಿಕೆಟ್‌ ಹಾಗೂ ಲಡ್ಡು ಮಾರಾಟದಿಂದ ಬಂದ ಆದಾಯ.

ಕಳೆದ ವರ್ಷ ಕೊರೊನಾ ಕಾರಣದಿಂದ ಸಾರ್ವಜನಿಕರಿಗೆ ದೇವರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಅಧಿಕಾರಿಗಳು ಹಾಗೂ ಗಣ್ಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೂ ಕಳೆದ ವರ್ಷ ದೇವಾಲಯಕ್ಕೆ 1.54 ಕೋ. ರೂ. ಆದಾಯ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next