Advertisement

ಮಂಗಳಮುಖೀಯರಿಗೆ ಸಂತ ಜೋಸೆಫ್ ಶಿಕ್ಷಣ ಸಂಸ್ಥೆ ನೆರವು

09:54 PM Jun 27, 2021 | Team Udayavani |

ಹಾಸನ: ಕೊರೊನಾ ನಿಯಂತ್ರಕ್ಕೆ ಜಾರಿ ಯಲ್ಲಿರುವಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖೀ ಯರಿಗೆ ನಗರದ ಸಂತ ಜೋಸೆಫ‌ರ ಶಿಕ್ಷಣ ಸಂಸ್ಥೆಯು ಆಹಾರ ಸಾಮಗ್ರಿಗಳ ಕಿಟ್‌ವಿತರಿಸಿತು.

Advertisement

ಈಸಂದರ್ಭದಲ್ಲಿಮಾತನಾಡಿದ ಸಂತಜೋಸೆಫ‌ರಶಿಕ್ಷಣಸಂಸ್ಥೆಹಾಸನಶಾಖೆಯಮುಖ್ಯಕಾರ್ಯದರ್ಶಿಫಾ.ಜೋಸೆಫ್ ಡಿಸೋಜಾ, ಲಾಕ್‌ಡೌನ್‌ ಸಂದರ್ಭದಲ್ಲಿ ಬಹುಪಾಲು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಹಾಗೆಯೇ ಮಂಗಳಮುಖೀಯರ ಜೀವನ ದುಸ್ತರವಾಗಿರುವ ಇಂತಹ ಸಂದರ್ಭದಲ್ಲಿ ಸಾಮಾಜಿಕಕಳಕಳಿ ಹೊಂದಿರುವ ಹಾಸನದ ಸಂತ ಜೋಸೆಫ‌ರಶಿಕ್ಷಣ ಸಂಸ್ಥೆ ಅವರ ನೆರವಿಗೆ ನಿಂತಿದೆ ಎಂದರು.

ದೀನ ದಲಿತರ ಸೇವೆಗೆ ನಮ್ಮ ಸಂಸ್ಥೆಯು ಸದಾಸಿದ್ಧವಿದ್ದು, ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸುತ್ತಾಬಂದಿದೆ. ಕೊರೊನಾ ನಿರ್ವಹಣೆಗೆ ರಚನೆಯಾಗಿರುವ ಸಂಸ್ಥೆಯ ಸಮಿತಿ ಮುಖ್ಯಸ್ಥ ಫಾ.ಹೆನ್ರಿ ಸಾಲ್ಡಾನ ಅವರು ಕೊರೊನಾ ಮತ್ತು ಸಾಂಕ್ರಾಮಿಕ ರೋಗಗಳಬಗ್ಗೆ ಅರಿವು ಮೂಡಿಸಿದರು.ಸಂಸ್ಥೆಯ ಪದವಿ ಕಾಲೇಜಿನ ಪ್ರಾಂಶುಪಾಲಫಾ.ಡೇನಿಯಲ್‌ ಫ‌ರ್ನಾಂಡೀಸ್‌ ಮಾತನಾಡಿದರು.ಸಂಸ್ಥೆಯ ಒಡನಾಡಿಗಳಾದ ಫಾದರ್‌ ಸಂತೋಷ್‌,ಫಾ. ಧೀರಜ್‌. ಫಾ. ಬಾಲರಾಜ್‌ ಮತ್ತು ಬ್ರದರ್‌ರಾಯ್ಸ ಹಾಗೂ ಜಸ್ವಿಟ್‌ ಸಂಸ್ಥೆ ಸಿಬ್ಬಂದಿ ಜೊತೆಗೂಡಿನಗರ ಮತ್ತು ಮಾವಿನಹಳ್ಳಿ ಹಾಗೂ ಅರಕಲಗೂಡುಮತ್ತಿತರ ಕಡೆ ಭೇಟಿ ನೀಡಿ ಆಹಾರ ಸಾಮಗ್ರಿ ಕಿಟ್‌ವಿತರಿಸಿದ್ದು, ಹಾಸನದಲ್ಲಿ ಎಎಸ್ಪಿ ನಂದಿನಿಉಪಸ್ಥಿತಿಯಲ್ಲಿ, ಮಂಗಳಮುಖೀಯರು ಹಾಗೂಸಂಕಷ್ಟಕ್ಕೀಡಾಗಿರುವ ಬಡವರನ್ನು ಗುರುತಿಸಿ ಆಹಾರಸಾಮಗ್ರಿಗಳಕಿಟ್‌ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next