Advertisement

HRP ಬ್ರಹ್ಮಾಂಡ ಭ್ರಷ್ಟಾಚಾರ : ಕಾಂಗ್ರೆಸ್ ಮುಖಂಡ ಡಿ.ಸಿ.ಸಣ್ಣಸ್ವಾಮಿ ಅಕ್ರೋಶ

06:20 PM Jul 29, 2021 | Team Udayavani |

ಆಲೂರು : ಹೆಚ್ಆರ್ಪಿಯಲ್ಲಿ 2008 ರಿಂದ 2020 ರವರೆಗೂ ಸುಮಾರು 10 ಸಾವಿರ ಎಕರೆ ಜಮೀನು ಬೋಗಸ್ ಆಗಿದೆ ಇದರಲ್ಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಕೈವಾಡವಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಡಿ.ಸಿ.ಸಣ್ಣಸ್ವಾಮಿ ಅಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು,  ಆಲೂರು-ಸಕಲೇಶಪುರ ಕ್ಷೇತ್ರದಲ್ಲಿ ಹೆಚ್ ಆರ್ ಪಿ ಯಿಂದ ಸುಮಾರು 10 ಸಾವಿರ ಎಕರೆಯಷ್ಟು ಜಮೀನು ಬೋಗಸ್ ಆಗಿ ಉಳ್ಳವರ ಪಾಲಾಗಿದೆ ಈ ಜಮೀನು ನಿರ್ಗತಿಕರಿಗೆ ಹಂಚಿಕೆ ಮಾಡಿದ್ದರೇ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಸದೃಢವಾಗುತ್ತಿದ್ದರು ಇದರ ಶಾಸಕರಿಗೆ ಕಿಂಚಿತ್ತು ಕಾಳಜಿ ಇಲ್ಲ ಶಾಸಕರು ಈ ಬಗ್ಗೆ ಒಂದು ದಿನವೂ ಚಕಾರ ಎತ್ತಿಲ್ಲ ಹಗರಣದಲ್ಲಿ ಇವರ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಸಮಗ್ರ ತನಿಖೆ ಅವಶ್ಯಕತೆ ಇದೆ ಎತ್ತಿನ ಹೊಳೆ ಯೋಜನೆ ಇಲಾಖೆ ವತಿಯಿಂದ ಆಲೂರು ತಾಲ್ಲೂಕಿನ ಮೂಲಕವೇ ಬೇರೆ ಜಿಲ್ಲೆಗಳಿಗೆ ನೀರು ನೀಡಲು ಹೊರಟಿದ್ದು ದೀಪದ ಕೇಳಗೆ ಕತ್ತಲೆ ಎಂಬಂತೆ ಆಲೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ ಅದರೆ ಕುಡಿಯುವ ನೀರಿನ ಬಗ್ಗೆ ಒಂದೇ ಒಂದು ದಿನವು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಇದು ಆಲೂರು ತಾಲ್ಲೂಕಿನ ದುರ್ದೈವ ಎಂದರು.

ಇದನ್ನೂ ಓದಿ : ಏರ್ ಟೆಲ್ ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ದರ ಶೇ. 60 ರಷ್ಟು ಹೆಚ್ಚಳ..!

ಅಭಿವೃದ್ಧಿ ಕುಂಠಿತ : ಆಲೂರು-ಸಕಲೇಶಪುರ-ಕಟ್ಟಾಯ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆಯಾಗಿದೆ ಹಣ ಮಾಡುವ ಉದ್ದೇಶದಿಂದ ಶಾಸಕರು ಪರ್ಸಂಟೇಜ್ ಮೂಲಕ ತಮ್ಮ ಹಿಂಬಾಲಕರಿಗೆ ಕಾಮಗಾರಿಗಳನ್ನು ನೀಡುತ್ತಿದ್ದು ಹಣ ಲೂಟಿ ಹೊಡೆಯುತ್ತಿದ್ದಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ ಈ ಭಾಗದಲ್ಲಿ ಕಾಡಾನೆ ಸಮಸ್ಯೆ ಇದ್ದು ಕಾಡಾನೆ ದಾಳಿಯಿಂದ ಹಲವಾರು ರೈತರು ಕೂಲಿ ಕಾರ್ಮಿಕರು ಪ್ರಾಣ ತೆತ್ತಿದ್ದಾರೆ ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಇವರಿಗೆ ಪರಿಹಾರ ಕೋಡಿಸುವಲ್ಲಿ ಶಾಸಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಎಸ್ ಸಿ ಘಟಕದ ಅಧ್ಯಕ್ಷ ಹೊನ್ನಪ್ಪ,ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿಜಯ್ ಕುಮಾರ್,ಹಾಗೂ ಇತರರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ : ಕಾಂಗ್ರೆಸ್ ನತ್ತ ಮುಖ ಮಾಡಿದ್ರಾ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ .?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next