ಚನ್ನರಾಯಪಟ್ಟಣ: ಜಿಲ್ಲೆಯ ಕಬ್ಬು ಬೆಳೆಗಾರರಜೀವನಾಡಿಯಾಗಿದ್ದ ಹೇಮಾವತಿ ಸಹಕಾರಿ ಸಕ್ಕರೆಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವಚಾಮುಂಡೇಶ್ವರಿ ಶುಗರ್ ವತಿಯಿಂದ ಹಲವುವರ್ಷದ ಬಳಿಕ ಕಬ್ಬು ಅರೆಯುವಿಕೆಪ್ರಾರಂಭಿಸುತ್ತಿರುವುದರಿಂದ ಕಬ್ಬು ಬೆಳೆಗಾರರಲ್ಲಿ ಸಂಭ್ರಮ ಮನೆ ಮಾಡಿದೆ.ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನುಕರಾರಿಗೆ ಪಡೆದ ಚಾಮುಂಡೇಶ್ವರಿ ಶುಗರ್ ಹಲವುವರ್ಷದ ಎಡರು ತೊಡರಿನ ನಡುವೆ ಕಳೆದ ಸಾಲಿನಲ್ಲಿಪ್ರಾಯೋಗಿಕವಾಗಿ 70 ಸಾವಿರ ಟನ್‌ಕಬ್ಬು ಅರೆದರು.
ಇದರಿಂದಾಗಿ ಕಾರ್ಖಾನೆಯ ಎಲ್ಲಾಯಂತ್ರಗಳು ಈಗಸಕಲ ಕಾರ್ಯಕ್ಕೆ ಅಣಿಯಾಗಿವೆ. ಹಾಗಾಗಿ ಜು.23(ಶುಕ್ರವಾರ)ರಂದುಕ್ಷೇತ್ರದ ಶಾಸಕಸಿ.ಎನ್.ಬಾಲಕೃಷ್ಣಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಲಿದ್ದು,ಕಬ್ಬು ಬೆಳೆಗಾರರಿಗೆ ಸಿಹಿ ನೀಡುತ್ತಿದ್ದಾರೆ.
ಕಾರ್ಖಾನೆ ವ್ಯಾಪ್ತಿ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಅರಸೀಕರೆ, ಆಲೂರು, ಹೊಳೆನರಸೀಪುರ, ಅರಕಲಗೂಡು, ಬೇಲೂರು, ಹಾಸನತಾಲೂಕು ವ್ಯಾಪ್ತಿಯ ರೈತರಲ್ಲದೆ, ತುಮಕೂರುಜಿಲ್ಲೆಯ ತುರುವೇಕೆರೆ, ತಿಪಟೂರು ತಾಲೂಕು,ಮಂಡ್ಯ ಜಿಲ್ಲೆಯ ನಾಗಮಂಗಲ ಹಾಗೂ ಕೆಆರ್‌ಪೇಟೆತಾಲೂಕಿನ ಕೆಲ ಹೋಬಳಿ ವ್ಯಾಪ್ತಿಯ ಕಬ್ಬುಬೆಳೆಗಾರರಲ್ಲದೇ ಕೊಡುಗು ಜಿಲ್ಲೆಯ ಕುಶಾಲನಗರ,ಶನಿವಾರಸಂತೆ, ಕೊಡ್ಲಿಪೇಟೆ ವ್ಯಾಪ್ತಿ ಕಬ್ಬುಬೆಳೆಗಾರರು ತಾಲೂಕಿನ ಶ್ರೀನಿವಾಸಪುರದಲ್ಲಿನ ಚಾಮುಂಡೇಶ್ವರಿ ಶುಗರ್ ಕಾರ್ಖಾನೆಗೆ ಕಬ್ಬುಸರಬರಾಜು ಮಾಡಲಿದ್ದಾರೆ.
ವಾರ್ಷಿಕ 10 ಲಕ್ಷ ಮೆಟ್ರಿಕ್ ಟನ್ ಅಗತ್ಯ: ಪ್ರತಿವರ್ಷವೂ ಕಾರ್ಖಾನೆ ನಿರಂತರವಾಗಿನಡೆಯಬೇಕೆಂದರೆ ಸುಮಾರು 25 ರಿಂದ 30 ಸಾವಿರಎಕರೆ ಪ್ರದೇಶದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಕಬ್ಬುಅಗತ್ಯವಿದೆ. ಇದನ್ನು ಪೂರೈಸಲು ರೈತರುಮುಂದಾಗಬೇಕಿದೆ. ದಶಕದ ಹಿಂದಿನಂತೆ ಕಾರ್ಖಾನೆಈಗ ನಡೆಯುವುದಿಲ್ಲ. ಗುಣಮಟ್ಟದ ಹೈಟೆಕ್‌ಯಂತ್ರಗಳು ಅಳವಡಿಕೆಯಿಂದ ಪುನಶ್ಚೇತನದಿಂದಸಿಂಗಾರಗೊಂಡಿದೆ. ಕಾರ್ಖಾನೆಯವರು ಬಿತ್ತನೆ ಕಬ್ಬುನೀಡುವ ಮೂಲಕ ರೈತರು ಕಬ್ಬು ಬೆಳೆಯುವಂತೆಉತ್ತೇಜನ ನೀಡುತ್ತಿದ್ದಾರೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ