ಸಕಲೇಶಪುರ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದವ್ಯಾಪಕ ಮಳೆ ಸುರಿಯುತ್ತಿದ್ದು, ವಿವಿಧೆಡೆ ಭೂಕುಸಿತ,ಮರಗಳು ಧರೆಗುಳಿವೆ.ತಾಲೂಕಿನ ಯಸಳೂರು, ಹೆತ್ತೂರು, ಹಾನುಬಾಳ್,ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮುಂಗಾರುಮಳೆ ಆರ್ಭಟಿಸಿದ್ದು, ಬೆಳಗೋಡು ಹೋಬಳಿಯಲ್ಲಿ ಸಹಮಳೆ ಮುಂದುವರಿದಿದೆ.
ಸತತವಾಗಿ ಮಳೆಸುರಿಯುತ್ತಿರುವುದರಿಂದಜನಜೀವನಅಸ್ತವಸೆöಗೊಂಡಿದ್ದು,ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆಬಿದ್ದು ಹಲವು ಗ್ರಾಮಗಳಲ್ಲಿ ವಿದ್ಯುತ್‌ಸ್ಥಗಿತಗೊಂಡಿದೆ.ತಪ್ಪಿದ ಹೆಚ್ಚಿನ ಅಪಾಯ: ಬಿಸ್ಲೆಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಚೌಡಮ್ಮ ದೇವಸ್ಥಾನದಒಂದು ಕಿ.ಮೀ.ಹಿಂದೆ ರಸ್ತೆಗೆಅಡ್ಡವಾಗಿ ಮರವೊಂದುಬಿದ್ದಿದ್ದರಿಂದ ವಾಹನಗಳಸಂಚಾರಕ್ಕೆಅಡ್ಡಿಯುಂಟಾಗಿತ್ತು.ಮರ ಬಿದ್ದ ಸಮಯದಲ್ಲಿ ಯಾವುದೇ ವಾಹನಗಳು ಬರದಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ.ನಂತರ ವನಗೂರು ಗ್ರಾಪಂ ಅಧ್ಯಕ್ಷ ಆನಂದ್‌ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಮರವನ್ನುತೆರವುಗೊಳಿಸಲಾಯಿತು.
ಮನೆ ಕುಸಿಯುವ ಸಾಧ್ಯತೆ: ಹೆತ್ತೂರು-ಬಾಚ್ಚಿಹಳ್ಳಿ ಮುಖ್ಯರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಕೆಲ ಕಾಲತೊಂದರೆಯಾಗಿತ್ತು. ಆನೆಮಹಲ್‌ಗ್ರಾಪಂ ಆನೆಮಹಲ್ ಗ್ರಾಮದಅಡ್ಡನಗುಡ್ಡೆ ಯಲ್ಲಿ ರಾಷ್ಟ್ರೀಯ ಹೆದ್ದಾರಿಯವರು ರಸ್ತೆಅಗಲಿಕರಣಕ್ಕಾಗಿ ರಸ್ತೆಯ ವಿವಿಧೆಡೆಯಂತ್ರಗಳನ್ನು ಬಳಸಿ ಕೊರೆದಿರುವಕಾರಣದಿಂದ ಸುರಿದ ಮಳೆಗೆ ಗೆರೆಕುಸಿದಿದ್ದು, ಈ ಗೆರೆಯ ಮೇಲ್ಭಾಗ ಸುಮಾರು15 ಮನೆಗಳಿದ್ದು, ಯಾವುದೆ ಸಂದರ್ಭದಲ್ಲಿಕುಸಿಯುವ ಸಾಧ್ಯತೆ ಇದೆ. ಕಳೆದ ಬಾರಿ ಇವರೆಲ್ಲರನ್ನೂ ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಾರಿಯೂ ತುಂಬಾಮಳೆಯಾಗುವ ನಿರೀಕ್ಷೆ ಇದ್ದು, ಜಿÇÉಾಡಳಿತ ಸೂಕ್ತ ಕ್ರಮವಹಿಸಬೇಕೆಂದು ಗ್ರಾಪಂ ಸದಸ್ಯ ಹಸೈನಾರ್ ಒತ್ತಾಯಿಸಿದ್ದಾರೆ.
ಮನೆಯ ಕೆಲವು ಭಾಗ ಶಿಥಿಲ: ಅಡ್ಡನಗುಡ್ಡೆಅಂಗನವಾಡಿಯ ಹಿಂಭಾಗ ಸುರಿದ ಭಾರೀ ಮಳೆಗೆ ಗೆರೆಕುಸಿದಿದ್ದು, ಅಂಗನವಾಡಿ ಕಟ್ಟಡ ಕುಸಿದು ಬೀಳುವಹಂತದಲ್ಲಿದೆ. ಅಡ್ಡನಗುಡ್ಡೆ ಸುಲೈಮಾನ್ ಎಂಬುವರಮನೆಯ ಹಿಂಭಾಗ ರಾತ್ರಿ ಭಾರೀ ಮಳೆಗೆ ಗೆರೆ ಕುಸಿದಿದ್ದು,ಮನೆಯ ಒಳಗೆ ಮಣ್ಣು ನುಗ್ಗಿ ಮನೆಯ ಕೆಲವು ಭಾಗಶಿಥಿಲಗೊಂಡಿರುತ್ತದೆ.ಯಸಳೂರು ಹಾಗೂ ಹೆತ್ತೂರುಹೋಬಳಿಯಉಚ್ಚಂಗಿ,ಆನೆಗುಂಡಿ, ಕುರಕಮನೆ, ಎಡೆಕುಮರಿ, ಬಿಸ್ಲೆ,ಹಡ್ಲುಗ¨ªೆ,ನೇರಡಿ, ಹುಲುಗತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿಬಿಡುವು ಕೊಟ್ಟು ಮಳೆ ಸುರಿಯಿತು. ಒಟ್ಟಾರೆಯಾಗಿತಾಲೂಕಿನಾದ್ಯಂತ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು,ಮಲೆನಾಡಿನ ಸಹಜ ವಾತಾವರಣ ಹಿಂದಿರುಗಿದೆ.