ಹಾಸನ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಪರಿಶಿಷ್ಟರ ಮತ್ತುಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ 8ಅಭಿವೃದ್ಧಿ ನಿಗಮಗಳಿಗೆ ರಾಜ್ಯ ಸರ್ಕಾರ ಕಳೆದ ವರ್ಷದ ಪೂರ್ಣಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ, ಬಿಡುಗಡೆಯಾದ ಅನುದಾನವನ್ನೂ ಖರ್ಚು ಮಾಡದೆ ಪರಿಶಿಷ್ಟ ಜಾತಿ ಮತ್ತು ಪಂಗಡದವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ,ಶಾಸಕ ಎಚ್.ಕೆ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,2020-21ನೇ ಸಾಲಿನಅನುದಾನವನ್ನು ರಾಜ್ಯ ಸರ್ಕಾರ ಈಗ ಬಿಡುಗಡೆ ಮಾಡಿದೆ. ಹೀಗಾದರೆ ಶೋಷಿತ ವರ್ಗಗಳ ಅಭಿವೃದ್ಧಿ ಹೇಗೆ ಸಾಧ್ಯ?ಹಾಸನಕ್ಕೆ ಹೆಚ್ಚು ಹಣ: ಹೇಮಾವತಿ ಜಲಾಶಯ ಯೋಜನೆ ವಿಶೇಷಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಾದ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗಿದೆ.
ಹಾಸನ ವಿಧಾನಸಭೆ ಕ್ಷೇತ್ರಕ್ಕೆ 8 ಕೋಟಿ ರೂ. ಹಾಗೂ ಸಕಲೇಶಪುರಕ್ಕೆ 3.50 ಕೋಟಿರೂ. ನೀಡಲಾಗಿದೆ. ಹೇಮಾವತಿ ಜಲಾಶಯ ಯೋಜನೆಯಿಂದಹೆಚ್ಚು ಮುಳುಗಡೆಯಾಗಿರುವುದು, ಹಾನಿ ಆಗಿರುವುದು ಹಾಗೂಪುನರ್ವಸತಿ ಆಗಬೇಕಾಗಿರುವುದು ಸಕಲೇಶಪುರ – ಆಲೂರುವಿಧಾನಸಭಾಕ್ಷೇತ್ರದಲ್ಲಿ. ಆದರೆ ಹಾಸನಕ್ಕೆ ಯಾವ ಆಧಾರದಲ್ಲಿ ಹೆಚ್ಚಿನಹಣ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಅಧಿಕಾರ ಉಳಿಸಿಕೊಳ್ಳಲು: ಹೇಮಾವತಿ ಜಲಾಶಯ ಯೋಜನೆ ಅಡಿರಸ್ತೆ ಕಾಮಗಾರಿಗಳಿಗೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ 43 ಕೋಟಿ ರೂ.ನೀಡಿದ್ದಾರೆ. ಈಗಾಗಲೇ ಟೆಂಡರ್ ಕೂಡ ಆಗಿದೆ. ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರು ಹೆಚ್ಚಾಗಿರುವುದು ಸಕಲೇಶಪುರ -ಆಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಶಾಸಕರಿಗೆಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಲಸಿಕೆ ಸಿಗುತ್ತಿಲ್ಲ: ಕೊರೊನಾ ಲಸಿಕೆ ಗ್ರಾಮೀಣ ಭಾಗಕ್ಕೆ ಸರಿಯಾಗಿತಲುಪುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವ ಹಾಗೂ ಮುಖ್ಯಮಂತ್ರಿಯವರಿಗೂ ಮಾಹಿತಿ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಲೆದುಜನ ಬೇಸತ್ತು ಹೋಗಿದ್ದಾರೆ. ಪ್ರಚಾರಕ್ಕಾಗಿ ಒಂದೆರಡು ದಿನ ಲಸಿಕೆಅಭಿಯಾನ ಮಾಡಿದ್ದು, ಬಿಟ್ಟರೆ ಜನರಿಗೆ ಲಸಿಕೆ ಸಿಗುತ್ತಿಲ್ಲ ಎಂದುದೂರಿದರು