Advertisement

ಬಾಲ್ಯವಿವಾಹ ಪ್ರೋತ್ಸಾಹ: ಕೇಸ್‌ ದಾಖಲಿಸಿ

11:04 PM Jul 09, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಗಳು ನಡೆಯದಂತೆ ಎಚ್ಚರವಹಿಸ ಬೇಕು. ಬಾಲ್ಯವಿವಾಹಕ್ಕೆ ಪ್ರೋತ್ಸಾಹಿ ಸುವ ಪೋಷಕರುಹಾಗೂ ಪ್ರೇರೇ ಪಿ ಸುವವರ ವಿರುದ್ಧ ಕಡ್ಡಾಯ ವಾಗಿ ಪ್ರಕರಣದಾಖಲಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ಸಮಿತಿಸಭೆ ನಡೆಸಿದ ಅವರು, ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆನಿಗಾ ವಹಿಸಬೇಕು. ಕೊರೊನಾದಿಂದ ತಂದೆ, ತಾಯಿ ಇಬ್ಬರೂಮೃತಪಟ್ಟ ಮಕ್ಕಳಿಗೆ 3,500 ರೂ.ಹಾಗೂ ತಂದೆ ಅಥವಾ ತಾಯಿಮೃತಪಟ್ಟ ಬಡ ಕುಟುಂಬದ ಮಕ್ಕಳನ್ನು ಗುರುತಿಸಿ 1000 ರೂ.ಸಹಾಯಧನ ನೀಡಬೇಕು ಎಂದು ಸೂಚಿಸಿದರು.

ಬಾಲಮಂದಿರಗಳಲ್ಲಿ ಕಾರ್ಯ ನಿರ್ವಸುವಂತಹ ಸಿಬ್ಬಂದಿಗೆಕೊರೊನಾ ಲಕ್ಷಣಗಳಿಲ್ಲದ್ದಿದ್ದರೂ ಸಹ ಕಡ್ಡಾಯ ವಾಗಿ 15ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆ ಮಾಡಿಸಬೇಕು. ವಿಶೇಷಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಹಾಗೂಬಾಧಿತ ಕುಟುಂಬ ಗಳ ಮಕ್ಕಳಿಗೆ ಶಿಕ್ಷಣ, ಪೂರಕ ಪೌಷ್ಟಿಕ ಆಹಾರಮತ್ತಿತರ ವೆಚ್ಚಗಳಿಗೆ ಮಾಸಿಕ 1000 ರೂ.ಆರ್ಥಿಕ ಸಹಾಯಧನವನ್ನು ಅರ್ಹ ಫ‌ಲಾನುಭವಿಗಳಿಗೆ ನೀಡಬೇಕು ಎಂದುನಿರ್ದೇಶಿಸಿದರು.

ಎ.ಎಸ್ಪಿ ಬಿ.ಎನ್‌.ನಂದಿನಿ, ಡಿಎಚ್‌ಒ ಡಾ.ಸತೀಶ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಇಲಾಖೆ ಉಪನಿರ್ದೇಶಕ ದಿಲೀಪ್‌, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಉಷಾ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆಕೋಮಲತಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next