ಸಿಗ್ನಲ್ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ ಶೇ. 35ರಷ್ಟು ವೃದ್ಧಿಯಾಗಿದ್ದು, ಹೆಚ್ಚು
ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ.
Advertisement
ಕಡಗರವಳ್ಳಿ ಹಾಗೂ ಎಡಕುಮೇರಿ ನಿಲ್ದಾಣಗಳಲ್ಲಿ ರೈಲುಗಳ ಕ್ರಾಸಿಂಗ್ ಸೌಲಭ್ಯಗಳು ಲಭ್ಯವಾಗಲಿದ್ದು ರೈಲುಗಳ ಸಂಚಾರ ಸಂಖ್ಯೆ ಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ. ಈ ಮಾರ್ಗದಲ್ಲಿ 24 ತಾಸುಗಳಲ್ಲಿ ರೈಲುಗಳ ಸಂಚಾರ ಸಾಮರ್ಥ್ಯ 20ಕ್ಕೇರಲಿದೆ. ಪ್ರಸ್ತುತ 13 ರೈಲುಗಳು ಸಂಚರಿಸುತ್ತಿವೆ.
ಮಂಗಳೂರು: ವಾರದಲ್ಲಿ ನಾಲ್ಕು ದಿನ ಕುಣಿಗಲ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (06515/ 16) ತಾತ್ಕಾಲಿಕವಾಗಿ ರದ್ದು ಪಡಿಸುವುದಾಗಿ ನೈಋತ್ಯ ರೈಲ್ವೇ ಪ್ರಕಟನೆ ತಿಳಿಸಿದೆ.
Related Articles
Advertisement
ಇದನ್ನೂ ಓದಿ :14.94 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ ವಶ : ಮಣಿಪಾಲದ ವಿದ್ಯಾರ್ಥಿ ಬಂಧನ
ವೇಳಾಪಟ್ಟಿ ಬದಲುರೈಲು ಸಂ. 06517 ಬೆಂಗಳೂರು-ಮಂಗಳೂರು ರೈಲು ರವಿವಾರ, ಸೋಮವಾರ, ಮಂಗಳವಾರದ ಬದಲು ಅ. 7ರಿಂದ ಬುಧವಾರ, ಶುಕ್ರವಾರ, ರವಿವಾರ ಸಂಚರಿಸಲಿದೆ. ರೈಲು ಸಂ. 06518 ಮಂಗಳೂರು- ಬೆಂಗಳೂರು ರೈಲು ಗುರುವಾರ, ಶುಕ್ರವಾರ, ಶನಿವಾರದ ಬದಲು ಅ. 8ರಿಂದ ಗುರುವಾರ, ಶನಿವಾರ, ಸೋಮವಾರಗಳಂದು ಸಂಚರಿಸಲಿದೆ.