Advertisement

Haryana: ಚಲಿಸುತ್ತಿರುವ ರೈಲಿಂದ ಮಹಿಳೆಯನ್ನು ಹೊರದಬ್ಬಿದ ಟಿಟಿಇ

12:36 AM Mar 05, 2024 | Team Udayavani |

ಫ‌ರೀದಾಬಾದ್‌: ಜನರಲ್‌ ಟಿಕೆಟ್‌ ಪಡೆದು ಎಸಿ ಬೋಗಿಗೆ ಹತ್ತಿದ್ದ 40 ವರ್ಷದ ಮಹಿಳೆಯನ್ನು ಚಲಿಸುತ್ತಿರುವ ರೈಲಿನಿಂದಲೇ ಟಿಟಿಇ ಹೊರದಬ್ಬಿದ ಅಮಾನುಷ ಘಟನೆ ಹರಿಯಾಣದ ಫ‌ರೀದಾಬಾದ್‌ನಲ್ಲಿ ನಡೆದಿದೆ. ರೈಲಿನಿಂದ ತಳ್ಳಲ್ಪಟ್ಟ ಬಳಿಕ ಮಹಿಳೆ ರೈಲು ಮತ್ತು ಪ್ಲಾಟ್‌ಫಾರಂ ನಡುವೆ ಸಿಲುಕಿಕೊಂಡು ಗಾಯ ಗೊಂಡಿದ್ದಾಳೆ. ತತ್‌ಕ್ಷಣವೇ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next