Advertisement

100ಕ್ಕೂ ಅಧಿಕ ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯ-14 ವರ್ಷ ಜೈಲು: ಯಾರೀತ ಜಿಲೇಬಿ ಬಾಬಾ?

04:27 PM Jan 11, 2023 | Team Udayavani |

ಹರ್ಯಾಣ: ಹರ್ಯಾಣದ ಬಾಬಾ ಬಾಲಕನಾಥ್ ದೇವಾಲಯದ ಅರ್ಚಕ, ಜಿಲೇಬಿ ಬಾಬಾ ಎಂದೇ ಹೆಸರು ಪಡೆದಿದ್ದ ಸ್ವಯಂ ಘೋಷಿತ ದೇವಮಾನವ ಅಮರ್ ಪುರಿಗೆ ನೂರಕ್ಕೂ ಅಧಿಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಫತೇಹಾಬಾದ್ ಫಾಸ್ಟ್ ಟ್ರ್ಯಾಕ್ ಕೋರ್ಟ್ ಬುಧವಾರ (ಜನವರಿ 11) 14 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಇದನ್ನೂ ಓದಿ:ದೆಹಲಿ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲೇ ಸಾರ್ವಜನಿಕರೆದುರು ಪಾನಮತ್ತನಿಂದ ಮೂತ್ರ ವಿಸರ್ಜನೆ

“ ದೋಷ ಪರಿಹಾರಕ್ಕಾಗಿ ಜಿಲೇಬಿ ಬಾಬಾನ ಬಳಿ ಬರುತ್ತಿದ್ದ ಮಹಿಳೆಯರಿಗೆ ಮಾದಕ ವಸ್ತು ನೀಡಿ ನಂತರ ಅವರ ಮೇಲೆ ದೈಹಿಕ ದೌರ್ಜನ್ಯ ನಡೆಸುತ್ತಿದ್ದ. ಅಷ್ಟೇ ಅಲ್ಲ ತನ್ನ ಪೈಶಾಚಿಕ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ವರದಿ ತಿಳಿಸಿದೆ.

“ಪೋಕ್ಸೋ ಕಾಯ್ದೆ ಸೆಕ್ಷನ್ 6 ಸೇರಿದಂತೆ ವಿವಿಧ ಕಲಂನಡಿ ಜಿಲೇಬಿ ಬಾಬಾ ಅಲಿಯಾಸ್ ಅಮರ್ ಪುರಿ (63ವರ್ಷ)ಗೆ ಹೆಚ್ಚುವರಿ ಜಿಲ್ಲಾ ಜಡ್ಜ್ ಬಲ್ವಂತ್ ಸಿಂಗ್ 14 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಜಿಲೇಬಿ ಬಾಬಾ ಅಲಿಯಾಸ್ ಅಮರ್ ಪುರಿ  ಖುಲಾಸೆಗೊಂಡಿರುವುದಾಗಿ ವರದಿ ತಿಳಿಸಿದೆ. ಎಲ್ಲಾ ಪ್ರಕರಣ ಸೇರಿ ಜಿಲೇಬಿ ಬಾಬಾ 14 ವರ್ಷ ಜೈಲುಶಿಕ್ಷೆ ಅನುಭವಿಸಬೇಕು ಎಂದು ಸಂತ್ರಸ್ತರ ಪರ ವಕೀಲ ಸಂಜಯ್ ವರ್ಮಾ ತಿಳಿಸಿದ್ದಾರೆ.

Advertisement

ಅಮರ್ ಪುರಿ ಅಲಿಯಾಸ್ ಬಿಲ್ಲು ಎಂಬ ಸ್ವಯಂಘೋಷಿತ ದೇವಮಾನವ ಜಿಲೇಬಿ ಬಾಬಾನನ್ನು ಫತೇಹಾಬಾದ್ ಕೋರ್ಟ್ ದೋಷಿ ಎಂದು ಜನವರಿ 5ರಂದು ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಅಮರ್ ಪುರಿ ಕೋರ್ಟ್ ರೂಂನಲ್ಲಿ ಕಣ್ಣೀರಿಟ್ಟಿರುವುದಾಗಿ ವರದಿ ಹೇಳಿದೆ.

ಯಾರೀತ ಜಿಲೇಬಿ ಬಾಬಾ?

ನಾಲ್ಕು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದ (ಪತ್ನಿ ತೀರಿ ಹೋಗಿದ್ದಳು) ಅಮರ್ ವೀರ್ ಎಂಬಾತ ಸುಮಾರು 23 ವರ್ಷಗಳ ಹಿಂದೆ ಪಂಜಾಬ್ ನ ಮಾನ್ಸಾದಿಂದ ಹರ್ಯಾಣದ ತೋಹಾನಾ ಪ್ರದೇಶಕ್ಕೆ ವಲಸೆ ಬಂದಿದ್ದ. ಮೊದಲ 13 ವರ್ಷಗಳ ಕಾಲ ಅಮರ್ ವೀರ್ ರೈಲ್ವೆ ನಿಲ್ದಾಣದ ಬಳಿ ಜಿಲೇಬಿ ಅಂಗಡಿ ಇಟ್ಟುಕೊಂಡಿದ್ದ. ಈ ಸಂದರ್ಭದಲ್ಲಿ ಅಮರ್ ವೀರ್ ಮಂತ್ರವಾದಿಯೊಬ್ಬನನ್ನು ಭೇಟಿಯಾಗಿದ್ದ, ನಂತರ ಆತನಿಂದ ಕೆಲವು ವಿದ್ಯೆಗಳನ್ನು ಕಲಿತುಕೊಂಡಿದ್ದ. ಇದಾದ ಬಳಿಕ ಅಮರ್ ವೀರ್ ತೋಹಾನಾದಿಂದ ಕೆಲವು ವರ್ಷಗಳ ಕಾಲ ಕಣ್ಮರೆಯಾಗಿದ್ದ. ಕೆಲವು ವರ್ಷಗಳ ನಂತರ ಊರಿಗೆ ವಾಪಸ್ ಆಗಿದ್ದ ಅಮರ್ ವೀರ್ ದೇವಸ್ಥಾನದ ಸಮೀಪ ಮನೆಯೊಂದನ್ನು ನಿರ್ಮಿಸಿದ್ದು, ಆತನಿಗೆ ಅನುಯಾಯಿಗಳು ಹುಟ್ಟಿಕೊಳ್ಳತೊಡಗಿದ್ದರು. ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದರು. ದಿನಕಳೆದಂತೆ ಅಮರ್ ವೀರ್ ಜಿಲೇಬಿ ಬಾಬಾನಾಗಿ ಜನಪ್ರಿಯತೆ ಪಡೆದಿದ್ದ. ಹೀಗೆ ತನ್ನ ಬಳಿ ಬರುತ್ತಿದ್ದ ಮಹಿಳೆಯರು, ಯುವತಿಯರಿಗೆ ಡ್ರಗ್ಸ್, ಅಮಲು ಪದಾರ್ಥ ನೀಡಿ ದೈಹಿಕ ದೌರ್ಜನ್ಯ ಎಸಗಿ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು, ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next