Advertisement

ಹರಿಯಾಣ ಗೃಹ ಸಚಿವ ಅನಿಲ್‌ ವಿಜ್‌ ಕಾರು ಅಪಘಾತ; ಪಾರು

12:46 AM Jan 08, 2023 | Team Udayavani |

ಚಂಡೀಗಢ: ಹರಿಯಾಣ ಗೃಹ ಸಚಿವ ಅನಿಲ್‌ ವಿಜ್‌ ಅವರ ಕಾರು ಶನಿವಾರ ಅಪಘಾತಕ್ಕೀಡಾಗಿದ್ದು, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಮೂರು ವಾರಗಳ ಅವಧಿಯಲ್ಲಿ ಎರಡನೇ ಬಾರಿಗೆ ವಿಜ್‌ ಅವರ ಕಾರು ಅಪಘಾತಕ್ಕೀಡಾಗಿದೆ.

Advertisement

ಕುಂಡ್ಲಿ-ಮನೆಸಾರ್‌-ಪಲ್ವಾಲ್‌ ಎಕ್ಸ್‌ಪ್ರೆಸ್‌ವೇ ನಲ್ಲಿ ಬೆಂಗಾವಲು ವಾಹನಗಳ ಜತೆಗೆ ಸಂಚರಿಸುತ್ತಿದ್ದ ಅನಿಲ್‌ ವಿಜ್‌ ಅವರ ಬೆಂಗಾವಲು ವಾಹನಕ್ಕೆ ಟ್ರಕ್‌ ಒಂದು ಢಿಕ್ಕಿ ಹೊಡೆದಿದೆ. ಬಳಿಕ ಬೆಂಗಾವಲು ವಾಹನ ಅನಿಲ್‌ ಅವರಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.

ಡಿ. 19ರಂದು ಹರಿಯಾಣದ ಬಹುದ್ದೂರ್‌ ಗಢದ ಬಳಿ ಕಾರು ಅಪಘಾತಕ್ಕೀಡಾಗಿತ್ತು. ಶನಿವಾರ ಅಪಘಾತವಾದ ಸ್ಥಳಕ್ಕೆ ಅದು ಸಮೀಪದಲ್ಲೇ ಇದೆ. ಗೃಹ ಸಚಿವ ಅನಿಲ್‌ ತಮ್ಮ ಸ್ವಕ್ಷೇತ್ರ ಅಂಬಾಲಾ ಕಂಟೋನ್ಮೆಂಟ್‌ನಿಂದ ಗುರುಗ್ರಾಮ್‌ಗೆ ತೆರಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next