ಚಂಡೀಗಢ: ಕಾರ್ಪೊರೇಟ್ ಕಂಪನಿಗಳಲ್ಲಿ ಇನ್ನು ಬಿಯರ್ ಮತ್ತು ವೈನ್ ಸೇವನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಏನಪ್ಪಾ ಇದು ಹುಬ್ಬೇರಿಸಬೇಡಿ.
ಹರ್ಯಾಣ ಸರ್ಕಾರದ ಜೂ.12ರಿಂದ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ಅಬಕಾರಿ ನೀತಿಯ ಅಂಶಗಳಲ್ಲಿ ಇದೂ ಒಂದು. ಅಂದ ಹಾಗೆ ಎಲ್ಲಾ ಕಂಪನಿಗಳಲ್ಲೂ ಈ ವ್ಯವಸ್ಥೆ ಲಭ್ಯವಾಗುವುದಿಲ್ಲ. ಅದಕ್ಕಾಗಿ ಸೂಕ್ತ ರೀತೀಯ ಪರವಾನಗಿ ಪಡೆಯಬೇಕಾಗುತ್ತದೆ.
ನೂತನ ಅಬಕಾರಿ ನೀತಿಯ ಪ್ರಕಾರ, ಕನಿಷ್ಠ ಒಂದು ಲಕ್ಷ ಚದರ ಅಡಿಯ ವಿಸ್ತೀರ್ಣದಲ್ಲಿ ಕಚೇರಿ ಇರಬೇಕು. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರಬೇಕು. ಅಲ್ಲದೆ, ಕಚೇರಿ ಕ್ಯಾಂಟೀನ್ ಅಥವಾ ಊಟ ಮಾಡುವ ಸ್ಥಳ 2,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿರಬೇಕು. ಪರವಾನಿಗೆ ಪಡೆಯಲು ವಾರ್ಷಿಕ 10 ಲಕ್ಷ ರೂ. ಪಾವತಿಸಬೇಕು. ಜತೆಗೆ ಭದ್ರತೆಯಾಗಿ ಹೆಚ್ಚುವರಿಯಾಗಿ ವಾರ್ಷಿಕ 3 ಲಕ್ಷ ರೂ.ಗಳನ್ನು ಪಾವತಿಸಬೇಕಿದೆ.
ಹೊಸ ನೀತಿಯ ಮೂಲಕ ಹರ್ಯಾಣ ಸರ್ಕಾರ ವಾರ್ಷಿಕವಾಗಿ 400 ಕೋಟಿ ರೂ. ಆದಾಯ ಪಡೆದುಕೊಳ್ಳುವ ಗುರಿಯನ್ನು ಹೊಂದಿದೆ.