Advertisement

ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್‌ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR

11:32 AM Feb 04, 2023 | Team Udayavani |

ಚಂಡೀಗಢ: ಹರಿಯಾಣದ ಜನಪ್ರಿಯ ಡ್ಯಾನ್ಸರ್‌, ಬಿಗ್‌ ಬಾಸ್‌ ಖ್ಯಾತಿಯ ಸ್ವಪ್ನ ಚೌಧರಿ ಹಾಗೂ ಕುಟುಂಬಸ್ಥರ ಮೇಲೆ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇಲೆ ಪಲ್ವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಸ್ವಪ್ನ ಚೌಧರಿಯ ಸಹೋದರನ ಹೆಂಡತಿ ಅಂದರೆ ನಾದಿನಿಗೆ ಕಿರುಕುಳ ಹಾಗೂ ಹಿಂಸೆ ಕೊಟ್ಟ ಆರೋಪದ ಮೇಲೆ ನಾದಿನಿ ಸ್ವಪ್ನ ಚೌಧರಿ ಸೇರಿ ಅವರ ಕುಟುಂಬದ ಸದಸ್ಯರ ಮೇಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ಹಿನ್ನೆಲೆ:  2018ರಲ್ಲಿ ಸ್ವಪ್ನ ಅವರ ಸಹೋದರ ಕರಣ್‌ ಎಂಬುವರು ಪಲ್ವಾಲ್ ಮೂಲದ ಹೆಣ್ಣನ್ನು ವಿವಾಹವಾಗಿದ್ದರು. ಚೌಧರಿ ಕುಟುಂಬಸ್ಥರ ಬೇಡಿಕೆಯಂತೆ ದಿಲ್ಲಿಯ ದುಬಾರಿ ಹೊಟೇಲ್‌ ನಲ್ಲಿ ಸುಮಾರು  42 ಲಕ್ಷ ಖರ್ಚು ಮಾಡಿ ವಿವಾಹವನ್ನು ಮಾಡಿಕೊಡಲಾಗಿತ್ತು. ದೊಡ್ಡ ಪ್ರಮಾಣದ ಚಿನ್ನವನ್ನು ಹಾಕಲಾಗಿತ್ತು. ಇಷ್ಟು ಮಾಡಿದ್ದರೂ ವರದಕ್ಷಿಣೆಗಾಗಿ ಅನೇಕ ಬಾರಿ ಚೌಧರಿ ಕುಟುಂಬ ಕಿರುಕುಳ ನೀಡಿದ್ದಾರೆ. ಇದಾದ ಬಳಿಕ ನಾದಿನಿ ಮಗುವಿಗೆ ಜನ್ಮ ನೀಡಿದಾಗ ಅದ್ಧೂರಿ ಕಾರ್ಯಕ್ರಮವನ್ನು ಚೌಧರಿ ಕುಟುಂಬ ಆಯೋಜನೆ ಮಾಡಿತ್ತು.

ಇದನ್ನೂ ಓದಿ: ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ

ಇದರ  ಬಳಿಕ ಚೌಧರಿ ಕುಟುಂಬ ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ, ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಕಾರು ನೀಡಬೇಕೆಂದು ಬೇಡಿಕೆಯಿಟ್ಟಿದ್ದು, ಇದನ್ನು ನಾದಿನಿ ಕುಟುಂಬ ಈಡೇರಿಸಲು ಆಗದೇ ಇದ್ದಾಗ ಮತ್ತೆ ಕಿರುಕುಳ ನೀಡಿದ್ದಾರೆ.

Advertisement

ಈ ಕಾರಣಕ್ಕೆ ನಾದಿನಿ ಸ್ವಪ್ನ ಚೌಧರಿ ಕುಟುಂಬಸ್ಥರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಈ ಹಿಂದೆ 2018 ರಲ್ಲಿ ಡ್ಯಾನ್ಸ್‌ ಕಾರ್ಯಕ್ರಮವೊಂದರ ಮುಂಗಡ ಹಣವನ್ನು ಪಡೆದು, ನೃತ್ಯ ಕಾರ್ಯಕ್ರಮ ನಡೆಸಿಕೊಡದ ಕಾರಣ ಸ್ವಪ್ನ ವಿರುದ್ಧ ದೂರು ದಾಖಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next