ಮೂಡುಬಿದಿರೆ: ಹರ್ಯಾಣ ದಾರುವೇಡಾ ಸರ್ವೋದಯ ತೀರ್ಥದಲ್ಲಿರುವ ಸಹಸ್ರ ಕೂಟ ಜಿನಾಲಯ ಹಾಗೂ 21 ಅಡಿ ಪದ್ಮಾಸನ ಭಂಗಿಯ ಭ| ಶಾಂತಿನಾಥ ಸ್ವಾಮಿ ಪಂಚ ಕಲ್ಯಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜ. 12ರಿಂದ 17ರ ವರೆಗೆ ಜರಗಿತು.
ಪ.ಪೂ. ಆಚಾರ್ಯವರ್ಯರಾದ ವಿಶುದ್ಧ ಸಾಗರ ಮುನಿರಾಜ್, ಅನುಮಾನ ಸಾಗರ ಅವರ ಉಪಸ್ಥಿತಿಯಲ್ಲಿ, ಮೂಡುಬಿದಿರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವ, ಮಾರ್ಗದರ್ಶನದಲ್ಲಿ ಪ್ರತಿಷ್ಠಾಚಾರ್ಯ ಹಸ್ತಿನಾಪುರ ನರೇಶ್ ಪಂಡಿತ್‌ತಂಡ, ಸೋಲಾಪುರ್ ಮಹಾವೀರ್ ಶಾಸ್ತ್ರೀ ಪಂಚಕಲ್ಯಾಣ ಪೂಜೆ ನೆರವೇರಿಸಿದರು.
ಧರ್ಮದಿಂದ ಪುಣ್ಯ ವೃದ್ಧಿ, ಪುಣ್ಯದಿಂದ ಪಾಪ ಕ್ಷಯ, ಪಾಪ ಕ್ಷಯದಿಂದ ಸ್ವರ್ಗ ಮೋಕ್ಷ ಪ್ರಾಪ್ತಿ. ನಿರಂತರ ಧರ್ಮ ಆಚರಣೆಯಿಂದ ದೇಶದಲ್ಲಿ ಶಾಂತಿ ಸೌಹಾರ್ದ ನೆಲೆಯಾಗುವುದು ಎಂದು ಆಚಾರ್ಯ ವಿಶುದ್ಧ ಸಾಗರ ಮುನಿ ರಾಜ್ ಆಶೀರ್ವಚನವಿತ್ತರು.
ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಐದು ದಿನಗಳ ಪಂಚ ಕಲ್ಯಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನವಿತ್ತರು.
ಕಾರ್ಯಕ್ರಮದಲ್ಲಿ ಅರುಣ್ ಜೈನ್, ಅನಿಲ್ ಜೈನ್, ರಾಜ್ ಕುಮಾರ್ ಜೈನ್, ಧರ್ಮಸ್ಥಳ ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮೊದಲಾದವರಿದ್ದರು.