Advertisement

Haryana CM ವಿಪಕ್ಷಗಳಿಗೆ ಸವಾಲು: ತಾಕತ್ತಿದ್ದರೆ ನೀವೇ ಸಂಖ್ಯಾಬಲ ತೋರಿಸಿ

12:04 AM May 13, 2024 | Team Udayavani |

ಚಂಡೀಗಢ: “ನಿಮಗೆ ಬಹುಮತ ಇದ್ದರೆ ರಾಜ್ಯಪಾಲರ ಮುಂದೆ ಶಾಸಕ ರನ್ನು ಹಾಜರುಪಡಿಸಿ ಸಂಖ್ಯಾ ಬಲ ನಿರೂಪಿಸಿ’ ಹೀಗೆಂದು ಹರಿಯಾಣದ ಬಿಜೆಪಿ ಘಟಕ ವಿಪಕ್ಷಗಳಿಗೆ ಸವಾಲು ಹಾಕಿದೆ. ಬಿಜೆಪಿ ಸರಕಾರಕ್ಕೆ ಸಂಖ್ಯಾ ಬಲದ ಕೊರತೆ ಇದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವಂತೆಯೇ ಹರಿಯಾಣ ಸಿಎಂ ನಯಾಬ್‌ ಸಿಂಗ್‌ ಸೈನಿ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸರಕಾರ ಬೀಳಿಸುವಷ್ಟು ಸಂಖ್ಯಾಬಲ ಇದ್ದರೆ ನಿಮ್ಮ ಪರವಿರುವ ಶಾಸಕರನ್ನು ರಾಜ್ಯಪಾಲರ ಮುಂದೆ ಹಾಜರುಪಡಿಸಿ. ವಿಶ್ವಾಸಮತ ಸಾಬೀತುಪಡಿಸಲು ನಮಗೆ ಯಾವ ಭಯವೂ ಇಲ್ಲ ಎಂದು ಹೇಳಿ ದ್ದಾರೆ. ಮಾರ್ಚ್‌ನಲ್ಲೇ ನಮ್ಮ ಸರಕಾರ ವಿಶ್ವಾಸಮತ ಪಡೆದುಕೊಂಡಿದೆ. ಭವಿಷ್ಯ ದಲ್ಲಿ ಯಾವಾಗ ವಿಶ್ವಾಸ ಮತ ಸಾಬೀತು ಪಡಿಸಬೇಕಾದ ಸಮಯ ಬರುತ್ತದೋ ಆಗ ನಾವು ಮತ್ತೆ ವಿಶ್ವಾಸಮತ ಪಡೆಯುತ್ತೇವೆ ಎಂದಿದ್ದಾರೆ.
ಮೂವರು ಪಕ್ಷೇತರ ಶಾಸಕರು ಸರಕಾರಕ್ಕೆ ಬೆಂಬಲ ವಾಪಸ್‌ ಪಡೆದ ಬಳಿಕ ಬಿಜೆಪಿ ಬಹುಮತ ಕಳೆದು ಕೊಂಡಿದೆ. ಹಾಗಾಗಿ ಸರಕಾರವನ್ನು ಅನೂರ್ಜಿತಗೊಳಿಸಿ, ರಾಷ್ಟ್ರಪತಿ ಆಡಳಿತ ತಂದು ಹರಿಯಾಣದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next