ಗುರುಗ್ರಾಮ್: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಸೇರಿದ್ದ 10 ಶಾರ್ಪ್ ಶೂಟರ್ ಗಳನ್ನು ಮಹತ್ವದ ಕಾರ್ಯಾಚರಣೆ ನಡೆಸಿದ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
Advertisement
10 ಶೂಟರ್‌ಗಳ ಪೈಕಿ 7 ಮಂದಿಯನ್ನು ಭೋಂಡ್ಸಿಯಲ್ಲಿ ಅಪರಾಧವನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದಾಗ ಬಂಧಿಸಲಾಯಿತು. ಅವರ ಬಂಧನದ ಸಮಯದಲ್ಲಿ, 7 ಶಂಕಿತರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೋಲ್ಡಿ ಬ್ರಾರ್ ಅವರ ಸೂಚನೆಯ ಮೇರೆಗೆ ಅವರು ಗುರುಗ್ರಾಮ್‌ನಲ್ಲಿ ಜಮಾಯಿಸಿದ್ದರು. ಬಂಧಿತ ಶೂಟರ್‌ಗಳು ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನಕ್ಕೆ ಸೇರಿದವರು ಎಂದು ಗುರುಗ್ರಾಮ್ ಅಪರಾಧ ವಿಭಾಗದ ಎಸಿಪಿ ವರುಣ್ ದಹಿಯಾ ಹೇಳಿದ್ದಾರೆ.