Advertisement

ಹರ್ಷಿಕಾ ಮೊಗದಲ್ಲಿ ಕಾಸಿನ ನಗು

01:41 PM Mar 14, 2023 | Team Udayavani |

ಕಾಸಿನ ಸರ’- ಹೀಗೊಂದು ಸಿನಿಮಾ ಮಾ.3ರಂದು ತೆರೆಕಂಡಿರೋದು ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಮೊದಲ ವಾರವನ್ನು ಯಶಸ್ವಿಯಾಗಿ ಪೂರೈಸಿ, ಎರಡನೇ ವಾರಕ್ಕೆ ಕಾಲಿಟ್ಟಿದೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

Advertisement

ಇತ್ತೀಚೆಗೆ ಇಡೀ ತಂಡ ಮಾಧ್ಯಮ ಮುಂದೆ ಬಂದು ತಮ್ಮ ಖುಷಿ ಹಂಚಿಕೊಂಡಿತು. ನಾಯಕಿ ಹರ್ಷಿಕಾ ಪೂಣತ್ಛ ಸ್ವಲ್ಪ ಹೆಚ್ಚೇ ಖುಷಿಯಾಗಿದ್ದರು. ಅದಕ್ಕೆ ಕಾರಣ ಅವರ ಪಾತ್ರ.

“ನಾನು ಈ ಸಿನಿಮಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಪ್ರಮೋಶನ್‌ಗೆ ಹೆಚ್ಚು ಶ್ರಮ ಹಾಕಿದ್ದೇನೆ. ಅದಕ್ಕೆ ಕಾರಣ ನನ್ನ ಪಾತ್ರ. ನಾನಿಲ್ಲಿ ಸಂಪಿಗೆ ಎಂಬ ಪಾತ್ರ ಮಾಡಿದ್ದು, ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ನನ್ನ ತಾಯಿ ಇತ್ತೀಚೆಗೆ ಸಿನಿಮಾ ಮೆಚ್ಚಿಕೊಂಡಿದ್ದಾರೆ. ನನ್ನ ಮಗಳು ಈ ತರಹದ ಒಂದು ಸಿನಿಮಾದಲ್ಲಿ ನಟಿಸಿದ್ದಾಳಲ್ಲ ಎಂಬ ಖುಷಿ ಅವರಿಗಿದೆ’ ಎಂದು ಸಿನಿಮಾ ಬಗ್ಗೆ ಖುಷಿ ಹಂಚಿಕೊಂಡರು.

ಇನ್ನು, ಈ ಚಿತ್ರವನ್ನು ನಂಜುಂಡೇಗೌಡ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಅವರು ಖುಷಿಯಾಗಿದ್ದಾರೆ. “ಸಿನಿಮಾಕ್ಕೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವತ್ತಿನ ಕಾಲಘಟ್ಟಕ್ಕೆ ಇಂತಹ ಸಿನಿಮಾ ಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿದ್ದೇವೆ ಆದರೆ ಕೃಷಿ ಇಲ್ಲದೆ ಜೀವನ ಸಾಗದು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆಹಾರ ಕೃಷಿಗೆ ಸಂಬಂಧ ಪಟ್ಟಂತೆ ಸಾವಯವ ಕೃಷಿ ಪ್ರಮುಖವಾಗಿದ್ದು, ನೈಸರ್ಗಿಕ ಆಹಾರ ನಮಗೆ ಬೇಕಾಗಿದೆ. ಅದರಾಚೆಗೆ ನಮ್ಮ ಭೂಮಿ ರಾಸಾಯನಿಕಗಳಿಂದ ದಿನೇ ದಿನೆ ಸವೇತಕ್ಕೆ ಒಳಗಾಗಿದೆ. ಆ ವಿಚಾರವನ್ನು ಜನ ಸಿನಿಮಾದಲ್ಲಿ ಇಷ್ಟಪಟ್ಟಿದ್ದಾರೆ’ ಎಂಬುದು ಚಿತ್ರ ನಿರ್ದೇಶಕ ನಂಜುಂಡೇಗೌಡರ ಮಾತು. ಉಳಿದಂತೆ ಚಿತ್ರತಂಡ ಸಿನಿಮಾದ ಗೆಲುವಿನ ಖುಷಿ ಹಂಚಿಕೊಂಡಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next